ಸಿಂಧನೂರು: ತಾಲೂಕಿನ ಕೆ.ಬಸಾಪುರ ಮತ್ತು ಕೆ.ದುರ್ಗಾಕ್ಯಾಂಪ್ ನಡುವಿನ ಹಳ ್ಳ ತುಂಬಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಆದ್ದರಿಂದ ಹಳ್ಳಕ್ಕೆ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಶಾಸಕ ಹಂಪನಗೌಡ ಬಾದರ್ಲಿಗೆ ಬುಧವಾರ ಮನವಿ ಸಲ್ಲಿಸಿದರು. ಅನೇಕ ವರ್ಷಗಳಿಂದ ಹಳ ್ಳಕ್ಕೆ ಸೇತುವೆ ನಿರ್ಮಿಸುವಂತೆ ಕೋರಿದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಗ್ರಾಮಸ್ಥರು ಹೊಲಗಳಲ್ಲಿ ಮನೆ ನಿರ್ಮಿಸಿದ್ದು, ಪ್ರತಿನಿತ್ಯ ವಿವಿಧ ಕೆಲಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಕೆ.ದುರ್ಗಾಕ್ಯಾಂಪ್ ಗ್ರಾಮಸ್ಥರು ಯಾವುದೇ ಕೆಲಸಕ್ಕೆ ಸಿಂಧನೂರಿಗೆ ಹೋಗಲು ಇದೆ ಮುಖ್ಯ ರಸ್ತೆಯಾಗಿದೆ. ಆದ್ದರಿಂದ ಕೂಡಲೇ ಹಳ್ಳಕ್ಕೆ ಸೇತುವೆ ನಿರ್ಮಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಆಗ್ರಹಿಸಿದರು.. ಪ್ರಮುಖರಾದ ಲಿಂಗಪ್ಪ ರಡ್ಡೇರ್, ಶಿವಣ್ಣ ಮಣ್ಣೂರು, ಎಚ್.ಶರಣಬಸಪ್ಪ, ಮಲ್ಲೇಶಗೌಡ, ಶರಣಪ್ಪ ಇತರರಿದ್ದರು.