ಶಿವಮೊಗ್ಗ : ವಿದ್ಯಾನಗರ ವಾರ್ಡ್ ನಂ.34ರಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ಆ ವಾರ್ಡ್‌ಗೆ ಸ್ಮಾರ್ಟ್‌ಸಿಟಿ ಅನುದಾನ ಸಮರ್ಪಕವಾಗಿ ಬಳಕೆಯಾಗಿಲ್ಲ ಎಂದು ನಿಸ್ವಾರ್ಥ ಜನಶಕ್ತಿ ವೇದಿಕೆ ಸಂಸ್ಥಾಪಕ ಎಂ.ಸಮೀವುಲ್ಲಾ ನೇತೃತ್ವದಲ್ಲಿ ಮಂಗಳವಾರ ಅಪರ ಜಿಲ್ಲಾಧಿಕಾರಿ ವಿ.ಅಭಿಷೇಕ್‌ಗೆ ಮನವಿ ಸಲ್ಲಿಸಲಾಯಿತು.
ವಾದಿ-ಇ-ಹುದಾ, ಮೆಹಬೂಬ್ ನಗರ, ಮದಾರಿಪಾಳ್ಯ ಮತ್ತಿತರ ಬಡಾವಣೆಗಳಲ್ಲಿ ಸಮಸ್ಯೆಗಳು ಬಗೆಹರಿದಿಲ್ಲ. ಇಲ್ಲಿನ ನಿವಾಸಿಗಳು ಮೂಲ ಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಎಲ್ಲ ಕಡೆ ಬೀದಿ ದೀಪಗಳ ಅಳವಡಿಸಬೇಕು. ಯುಜಿಡಿ ಕಾಮಗಾರಿ ಆರಂಭಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ರಸ್ತೆಗಳನ್ನು ದುರಸ್ತಿ ಮಾಡಬೇಕು. ಹಂದಿ, ನಾಯಿಗಳನ್ನು ನಿಯಂತ್ರಿಸಬೇಕು. ಸರಿಯಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಶಿವಮೊಗ್ಗ-ಭದ್ರಾವತಿ ಬೈಪಾಸ್ ರಸ್ತೆಯಲ್ಲಿ ಸೂಳೆಬೈಲ್ ಸರ್ಕಲ್‌ವರೆಗೆ ದಾರಿದೀಪಗಳು ಸಂಪೂರ್ಣ ಹಾಳಾಗಿವೆ. ಸಾರ್ವಜನಿಕರು ಕತ್ತಲಿನಲ್ಲೇ ಓಡಾಡುವಂತೆ ಆಗಿದೆ. ಇದೇ ಕಾರಣಕ್ಕೆ ಕಳ್ಳರ ಕಾಟ ಹೆಚ್ಚಾಗಿದೆ. ಕೂಡಲೇ ಬೀದಿ ದೀಪಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಮಹಮದ್ ಯೂಸಫ್, ಕೆ.ಬಿ.ಇಬ್ರಾಹಿಂ, ಸೂಫಿ ಮೌಲಾನ, ಮಹಮದ್ ಹನೀಫ್, ಮಹಮದ್ ಗೌಸ್‌ಖಾನ್, ವಹಾಬ್ ಸಾಬ್, ಶಫೀ ಬೇಗ್, ಅಬ್ದುಲ್ ರಹೀಂ, ಜಫ್ರುಲ್ಲಾ ಖಾನ್, ರಫೀಕ್ ಅಹ್ಮದ್ ಇತರರಿದ್ದರು.