ನ್ಯೂಸ್

ಪಾಕಿಸ್ತಾನದ ಗಡಿ ಭಾಗದಲ್ಲಿನ ಸೇನಾ ಘಟಕಕ್ಕೆ ಆರು ಅಪಾಚೆ ಅಟ್ಯಾಕ್ ಚಾಪರ್‌ಗಳ ನಿಯೋಜನೆ; ಸೇನಾ ಮುಖ್ಯಸ್ಥ ಜನರಲ್​ ನರವಾಣೆ

malli

ನವದೆಹಲಿ: ಪಶ್ಚಿಮ ಗಡಿಯಲ್ಲಿರುವ ಸೇನಾ ಘಟಕಕ್ಕೆ ಆರು ಅಪಾಚೆ ಅಟ್ಯಾಕ್ ಚಾಪರ್‌ಗಳನ್ನು ನೀಡಲಾಗುವುದು ಎಂದು ಸೇನಾ ಮುಖ್ಯಸ್ಥ ಜನರಲ್​ ಮನೋಜ್​ ಮುಕುಂದ್​ ನರವಾಣೆ ತಿಳಿಸಿದ್ದಾರೆ.

ಗಡಿ ಭಾಗದಲ್ಲಿ ಶಸ್ತ್ರಸಜ್ಜಿತ ಸೇನೆಯಿಂದ ಅಪಾಯವಿರುತ್ತದೆ. ಹಾಗಾಗು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಡಿಸೆಂಬರ್​ 31ರಂದು ಸೇನಾ 28ನೇ ಮುಖ್ಯಸ್ಥರಾಗಿ ನರವಾಣೆ ಅಧಿಕಾರ ವಹಿಸಿಕೊಂಡಿದ್ದರು. ನರವಾಣೆ ಅವರು ಈ ಮೊದಲು ಉಪ ಸೇನಾ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. (ಏಜೆನ್ಸೀಸ್​)