ನ್ಯೂಸ್

ನಮ್ಮ ತಂಟೆಗೆ ಬಂದ್ರೆ ರಕ್ತ ಕಕ್ಕಿಸುತ್ತೇವೆ! ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಎಚ್ಚರಿಕೆ

ಬೀಜಿಂಗ್​: "ನಮ್ಮ ತಂಟೆಗೆ ಬಂದರೆ ರಕ್ತ ಕಾರುವಂತೆ ಮಾಡುತ್ತೇವೆ' ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಗುರುವಾರ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ. ಚೀನೀಸ್​ ಕಮ್ಯುನಿಸ್ಟ್​ ಪಾರ್ಟಿಯ ಶತಮಾನೋತ್ಸವ ಆಚರಣೆಯನ್ನು ಉದ್ದೇಶಿಸಿ ಮಾತನಾಡಿದ ಜಿನ್​ಪಿಂಗ್​, ಚೀನಾಕ್ಕೆ ಮರುರೂಪ ನೀಡಲಾಗಿದ್ದು, ಹಿಂದಿರುಗಲಾರದಷ್ಟು ದೊಡ್ಡ ಬದಲಾವಣೆಗೆ ಒಳಗಾಗಿದೆ.

ದೇಶದ ರಾಷ್ಟ್ರೀಯ ಹಿತಾಸಕ್ತಿ ಕಾಪಾಡುವುದಕ್ಕಾಗಿ ವಿಶ್ವ ದರ್ಜೆಯ ಸೇನೆಯನ್ನು ಕಟ್ಟುವ ಕೆಲಸ ಮುಂದುವರಿದಿದೆ. ಇದು ಚೀನಾದ ಯುಗ. ಚೀನಾವನ್ನು ಬೆದರಿಸುವ ಕಾಲ ಇನ್ನಿಲ್ಲ. ಆದಾಯ ಹೆಚ್ಚಳ ಮಾಡಿಕೊಂಡು, ರಾಷ್ಟ್ರೀಯ ಹೆಮ್ಮೆಯನ್ನು ಪುನಸ್ಥಾಪಿಸುವ ಕೆಲಸ ಶುರುವಾಗಿದೆ ಎಂದು ಹೇಳಿದ್ದಾರೆ.

ಚೀನಾದ ಭೌಗೋಳಿಕ ವ್ಯಾಪ್ತಿಯನ್ನು ಏಕೀಕರಿಸುವ ಪ್ರಯತ್ನ ಶುರುವಾಗಿದೆ. ತೈವಾನ್​ ಅನ್ನು ಚೀನಾದ ಜತೆಗೆ ಸೇರಿಸಿಕೊಳ್ಳಲಾಗುವುದು. ಅದು ಚೀನಾದ್ದೇ ಭಾಗವಾಗಿದೆ. ತೈವಾನ್​ ಸ್ವಾತಂತ್ರ$್ಯದ ಪ್ರಯತ್ನವನ್ನು ಮಟ್ಟಹಾಕಲಾಗು ವುದು ಎಂದು ಜಿನ್​ಪಿಂಗ್​ ಎಚ್ಚರಿಸಿದ್ದಾರೆ. ಹಾಂಕಾಂಗ್​ನಲ್ಲೂ ಸ್ವಾತಂತ್ರ$್ಯದ ಕನಸನ್ನು ಚೀನಾ ಚಿವುಟಿ ಹಾಕಿದೆ.

ಭಾರತಕ್ಕೂ ಎಚ್ಚರಿಕೆಯ ಂಟೆ

ಪೂರ್ವ ಲಡಾಖ್​, ಅರುಣಾಚಲ ಪ್ರದೇಶ ಭಾಗದಲ್ಲಿ ಚೀನಾ ಸೇನಾ ನಿಯೋಜನೆ ಹೆಚ್ಚುತ್ತಿದೆ. ಇದರ ಬೆನ್ನಿಗೆ ಜಿನ್​ಪಿಂಗ್​ ಚೀನಾ ಏಕೀಕರಣದ ಪ್ರಸ್ತಾಪ ಎತ್ತಿರುವುದು ಕೂಡ ಭಾರತಕ್ಕೆ ನೀಡಿದ ಪರೋಕ್ಷ ಎಚ್ಚರಿಕೆ. ಭಾರತದ ಭೂಭಾಗವನ್ನು ತನ್ನದೆಂದು ಪ್ರತಿಪಾದಿಸುತ್ತ ಕಬಳಿಸುವುದಕ್ಕೆ ಚೀನಾ ಸಜ್ಜಾಗಿರುವುದಕ್ಕೆ ಇದು ಮುನ್ಸೂಚನೆ ಎಂದು ರಕ್ಷಣಾ ಪರಿಣತರು ಎಚ್ಚರಿಸಿದ್ದಾರೆ.

ಚೀನಾದ 19 ಬ್ರಾ$್ಯಂಡ್​ಗೆ ಅಮೆಜಾನ್​ ನಿಷೇಧ

ಅಮೆರಿಕ ಮೂಲದ ಅಮೆಜಾನ್​ ಇ&ಕಾಮರ್ಸ್​ ತಾಣದಲ್ಲಿ ಚೀನಾದ 19 ಎಲೆಕ್ಟ್ರಾನಿಕ್ಸ್​ ಬ್ರಾ$್ಯಂಡ್​ಗಳ ವಸ್ತುಗಳ ಮಾರಾಟವನ್ನು ನಿಷೇಧಿಸಲಾಗಿದೆ. ಗ್ರಾಹಕರಿಗೆ ಗ್ಟ್​ಿ ಕಾರ್ಡ್​ ನೀಡಿ ಉತ್ಪನ್ನಗಳ ಬಗ್ಗೆ ಪಾಸಿಟಿವ್​ ರಿವ್ಯೂ ಬರೆಯುವುದಕ್ಕೆ ಬ್ರಾ$್ಯಂಡ್​ಗಳು ಆಮಿಷ ಒಡ್ಡುತ್ತಿದ್ದವು. ಚೀನಾದ ಇ&ಕಾಮರ್ಸ್​ ಜಗತ್ತಿನಲ್ಲಿ ಇದು ಸಾಮಾನ್ಯ ವಾಗಿದ್ದು, ಇದನ್ನು ಅಮೆಜಾನ್​ನಲ್ಲೂ ಜಾರಿಗೊಳಿಸಿದ್ದವು. ಹೀಗಾಗಿ ಅವುಗಳನ್ನು ನಿಷೇಧಿಸಲಾಗಿದೆ ಎಂದು ಅಮೆಜಾನ್​ ತಿಳಿಸಿದೆ. ಅಮೆಜಾನ್​ನಲ್ಲಿ ಇವುಗಳ ವಾರ್ಷಿಕ ವಹಿವಾಟು 100 ಶತಕೋಟಿ ಡಾಲರ್​ ಆಗಿತ್ತು.