ನ್ಯೂಸ್

ಮಾನವನ ಆರೋಗ್ಯದ ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳಬಹುದಾಗಿದೆ

ಮೈಸೂರು: ಪ್ರಸ್ತುತ ದಿನಮಾನದಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಬಂದಿರುವುದರಿಂದ ಮಾನವನ ಆರೋಗ್ಯದ ಯಾವುದೇ ವಿಷಯವನ್ನು ಕ್ಷಣ ಮಾತ್ರದಲ್ಲಿ ಅರಿತುಕೊಳ್ಳಬಹುದಾಗಿದೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಸಿ.ಪಿ.ಮಧು ಅಭಿಪ್ರಾಯಪಟ್ಟರು.

ಜೆಎಸ್‌ಎಸ್ ವಾಕ್ ಮತ್ತು ಶ್ರವಣ ಸಂಸ್ಥೆಯ ವತಿಯಿಂದ ಗುರುವಾರ ಡಾ.ರಾಜೇಂದ್ರ ಭವನದಲ್ಲಿ ಏರ್ಪಡಿಸಿದ್ದ ‘ಭಾರತದಲ್ಲಿ ನವಜಾತ ಶಿಶುಗಳ ಶ್ರವಣ ತಪಾಸಣೆ; ಅನುಸರಿಸಬೇಕಾದ ಶಿಷ್ಠಾಚಾರ, ಪೋಷಕರ ಭಾಗವಹಿಸುವಿಕೆ, ತಾಂತ್ರಿಕ ಸಮನ್ವಯ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಿ ನವಜಾತ ಶಿಶುಗಳಲ್ಲಿ ಕಂಡುಬರುವ ಶ್ರವಣ ದೋಷವನ್ನು ಹುಟ್ಟಿದ ತಕ್ಷಣವೇ ಗುರುತಿಸುವ ಸೌಲಭ್ಯಗಳು ಈಗ ಬಂದಿವೆ. ಇದರೊಟ್ಟಿಗೆ ಪ್ರಪಂಚದಲ್ಲಿ ಇರುವ ನುರಿತ ತಜ್ಞ ವೈದ್ಯರನ್ನು ವರ್ಚ್ಯುವೆಲ್‌ನಲ್ಲಿ ಸಂಪರ್ಕಿಸಿ ಸಲಹೆ-ಸೂಚನೆಗಳನ್ನು ಪಡೆದುಕೊಂಡು ಔಷಧೋಪಚಾರ ಮಾಡಬಹುದಾಗಿದೆ. ಅಲ್ಲದೇ ಈ ವಿಷಯದಲ್ಲಿ ಕೇವಲ ವೈದ್ಯರಲ್ಲದೇ, ಪೋಷಕರಿಗೂ ಮಕ್ಕಳ ಶ್ರವಣ ದೋಷದ ಗುಣ ಲಕ್ಷಣಗಳ ಬಗ್ಗೆ ಅರಿವು ಇರಬೇಕಾಗುತ್ತದೆ ಎಂದರು.