ಮುಂಬೈ: ಕ್ರಿಕೆಟಿಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ದಂಪತಿ ತಮ್ಮ ಎರಡನೇ ಗರ್ಭಧಾರಣೆಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಮೂಲಗಳ ಪ್ರಕಾರ ನಟಿ ಲಂಡನ್‌ನಲ್ಲಿ ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ವರದಿಯಾಗಿದೆ.
ಅನುಷ್ಕಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿಗಳಿವೆ. ಇದೀಗ ಖ್ಯಾತ ಉದ್ಯಮಿಯೊಬ್ಬರು ಟ್ವೀಟ್ ಮಾಡಿ ಇವರ ಮಗುವಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದು, ವಿರಾಟ್ ಮತ್ತು ಅನುಷ್ಕಾ ಮಗುವಿನ ಬಗ್ಗೆ ದೊಡ್ಡ ಅಪ್‌ಡೇಟ್‌ವೊಂದನ್ನು ನೀಡಿದ್ದು, ನಟಿ ಅನುಷ್ಕಾ ಗರ್ಭಿಣಿಯಾಗಿರುವ ಬಗ್ಗೆ ಪೋಸ್ಟ್ ಶೇರ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದಾರೆ.
ವಿರಾಟ್ , ಅನುಷ್ಕಾ ಹೆಸರನ್ನು ಉಲ್ಲೇಖಿಸದಿದ್ದರೂ, ಪೋಸ್ಟ್ ಅವರ ಮಗುವಿನ ಬಗ್ಗೆ ಎಂಬುದು ಸ್ಪಷ್ಟವಾಗಿದೆ. "ಈ ಸೆಲೆಬ್ರಿಟಿ ಜೋಡಿಗಳಿಗೆ ಶೀಘ್ರದಲ್ಲೇ ಎರಡನೇ ಮಗು ಜನಿಸುತ್ತದೆ. ಈ ಮಗು ತನ್ನ ಶ್ರೇಷ್ಠ ಕ್ರಿಕೆಟಿಗ ತಂದೆಯಂತೆ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆಯೇ ಅಥವಾ ತಾಯಿಯನ್ನು ಅನುಸರಿಸಿ ಸಿನಿಮಾ ತಾರೆಯಾಗುವುದೇ? ಆದರೆ ಈ ಭಾರತೀಯ ಮಗು ಲಂಡನ್ ನಲ್ಲಿ ಹುಟ್ಟುತ್ತದೆ ಎಂದು ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಅವರು ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು.. ಅಭಿಮಾನಿಗಳು ಪೋಸ್ಟ್‌ಗೆ ವಿರುಷ್ಕಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
‘ಈ ಭಾರತೀಯ ಮಗು ಲಂಡನ್ ನಲ್ಲಿ ಜನಿಸಲಿದೆ’ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಅನುಷ್ಕಾ ಶರ್ಮಾ ಹಾಗೂ ವಿರಾಟ್ ಇಬ್ಬರೂ ತಮ್ಮ ವೈಯಕ್ತಿಕ ಜೀವನವನ್ನು ತುಂಬಾ ಖಾಸಗಿಯಾಗಿಡಲು ಬಯಸುತ್ತಾರೆ. ದಂಪತಿ ಮಾತ್ರ ಯಾವುದೇ ಘೋಷಣೆ ಮಾಡಿಲ್ಲ.
ಅನುಷ್ಕಾ ಶರ್ಮಾ ಡಿಸೆಂಬರ್ 2017 ರಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಗಂಟು ಹಾಕಿದರು. ನಟಿ ನಂತರ 2018 ರಲ್ಲಿ ಅವರ ಚಲನಚಿತ್ರ ಝೀರೋ ಬಿಡುಗಡೆಯಾದ ನಂತರ ನಟನೆಯಿಂದ ವಿರಾಮ ತೆಗೆದುಕೊಂಡರು. 2021 ರ ಜನವರಿಯಲ್ಲಿ ದಂಪತಿಗಳು ತಮ್ಮ ಮಗಳು ವಾಮಿಕಾ ಅವರನ್ನು ಸ್ವಾಗತಿಸಿದರು. ಅಂದಿನಿಂದ ಅನುಷ್ಕಾ ಯಾವುದೇ ಚಿತ್ರಗಳಲ್ಲಿ ಕೆಲಸ ಮಾಡಿಲ್ಲ. ಅವರು ಕ್ರೀಡಾ ನಾಟಕ ಚಕ್ಡಾ ಎಕ್ಸ್‌ಪ್ರೆಸ್‌ನೊಂದಿಗೆ ಪುನರಾಗಮನವನ್ನು ಮಾಡಲು ನಿರ್ಧರಿಸಿದ್ದಾರೆ. ನಟಿ ಈಗಾಗಲೇ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದು, ಚಿತ್ರದ ಬಿಡುಗಡೆಯ ದಿನಾಂಕವು ಸದ್ಯಕ್ಕೆ ತಿಳಿದಿಲ್ಲ.