ಬೆಂಗಳೂರು: ಅತಿವೃಷ್ಟಿ, ನೆರೆ ಹಾವಳಿಯಿಂದ ಸಂಕಷ್ಟಕ್ಕೆ ತುತ್ತಾಗಿರುವ ಅನ್ನದಾತರಿಗೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲ. ಕನಿಷ್ಠ ಬೆಂಬಲ ಬೆಲೆಯಡಿ ಮಾರಾಟಕ್ಕೂ ಮಾನದಂಡಗಳ ಹೆಸರಿನಲ್ಲಿ ಸತಾಯಿಸಲಾಗುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿರುವ ಅವರು, ಹಲವು ಜಿಲ್ಲೆಗಳ ರೈತರು ಅನುಭವಿಸುತ್ತಿರುವ ತೊಂದರೆಯತ್ತ ಸರ್ಕಾರದ ಗಮನಸೆಳೆದು, ತಕ್ಷಣ ಮಧ್ಯೆ ಪ್ರವೇಶಿಸಿ, ಎಂಎಸ್‌ಪಿ ಉದ್ದೇಶ ಲಪ್ರದಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರಕೃತಿ ವಿಕೋಪದಿಂದ ನಲುಗಿ ಹೋಗಿರುವ ರೈತರು ರೈತರು ಅಷ್ಟೋ ಇಷ್ಟೋ ಕೈಹಿಡಿದಿರುವ ಸಲನ್ನು ಒಳ್ಳೆಯ ಬೆಲೆಗೆ ಮಾರಿ ನಿಟ್ಟುಸಿರು ಬಿಡೋಣವೆಂದರೆ ್ರೂಟ್ಸ್ ಐಡಿ ಇಲ್ಲ, ಗುಣಮಟ್ಟ ಇಲ್ಲ (ಎ್ಎಕ್ಯೂ), ಉತ್ತಮ ಗೋಣಿಚೀಲದಲ್ಲಿ ತುಂಬಿಲ್ಲವೆಂದು ಇಲ್ಲಸಲ್ಲದ ಕುಂಟು ನೆಪ ಹೇಳಿ ಖರೀದಿ ಮಾಡದೆ ರೈತ ವಿರೋಧಿ ಕಾಂಗ್ರೆಸ್ ಸರ್ಕಾರ ಗೋಳಾಡಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಕುರ್ಚಿ ಕಿತ್ತಾಟದಲ್ಲಿ ನೆರೆಬಾಧಿತ ರೈತರ ಸಂಕಷ್ಟವನ್ನು ಸರ್ಕಾರ ಸಂಪೂರ್ಣವಾಗಿ ಮರೆತಿದೆ. ರೈತರಿಗೆ ಇನ್ನಷ್ಟು ತೊಂದರೆ ಕೊಡದೆ ಈ ಕೂಡಲೇ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು, ಸೂರ್ಯಕಾಂತಿ, ಸೋಯಾಬೀನ್, ಉದ್ದಿನ ಕಾಳು ಖರೀದಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಆರ್.ಅಶೋಕ್ ಒತ್ತಾಯಿಸಿದ್ದಾರೆ.