"ವಿದ್ಯತೇ ಸಾಗರಸ್ಯಾಂತೊ ದಾನಸ್ಯಾಂತೊ ನ ವಿದ್ಯತೇ' ಸಾಗರಕ್ಕೆ ಸಿಮೆಯುಂಟು, ದಾನಕ್ಕೆ ಸೀಮೆ ಇಲ್ಲ. ಯಾರು ಬೇಕಾದರೂ ಏನನ್ನಾದರೂ ಎಷ್ಟಾದರೂ ಕೊಡಬಹುದು. ಭೂದಾನ, ಗೋದಾನ, ಹಿರಣ್ಯದಾನ ಮುಂತಾದ ಅಸಂಖ್ಯ ದಾನಗಳು ಪ್ರಾಚಿನ ಶಾಸಗಳಲ್ಲಿ ಉಲ್ಲೇಖಿತವಾಗಿವೆ. ದೇಹದ ಅಮೂಲ್ಯ ಅವಯವಗಳನ್ನೂ ದಾನ ಮಾಡುವ ಪದ್ಧತಿಯು ಪ್ರಾಚಿನ ಕಾಲದಿಂದಲೂ ಇದೆ. ದದೀಚಿ ಮಹಷಿರ್ಯು ರಾಸರ ಸಂಹಾರಕ್ಕಾಗಿ ದೇವತೆಗಳ ಅಪೇೆಯಂತೆ ತನ್ನ ದೇಹದ ಬೆನ್ನುಮೂಳೆಯನ್ನು ದಾನ ಮಾಡಿದ್ದು, ಅದರಿಂದ ವಜ್ರಾಯುಧವನ್ನು ತಯಾರಿಸಿದ ವಿಷಯವು ಪುರಾಣಗಳಲ್ಲಿದೆ. ಕಣ್ಣಪ್ಪನು ತನ್ನ ಎರಡೂ ಕಣ್ಣುಗಳನ್ನು ಶಿವನಿಗೆ ದಾನ ಮಾಡಿ ಶಿವಕೃಪೆಗೆ ಪಾತ್ರವಾದದ್ದು ಸರ್ವವಿಧಿತವೇ ಸರಿ.
ಈ ವೈಜ್ಞಾನಿಕ ಯುಗದಲ್ಲಿ ಇನ್ನೂ ಹೆಚ್ಚಿನ ಮಹತ್ವ ಪ್ರಾಪ್ತವಾಗಿದೆ. ರಕ್ತದಾನ, ಚರ್ಮದಾನ, ನೇತ್ರದಾನ, ಕಿಡ್ನಿದಾನ, ಲಿವ್ಹರ್ ದಾನ, ಹೃದಯದಾನ ಮುಂತಾದವು ದಾನದ ಯಾದಿಗೆ ಸೇರ್ಪಡೆಯಾಗಿವೆ. ಒಟ್ಟಿನಲ್ಲಿ ದಾನಕ್ಕೆ ಬಾರದ ಯಾವ ವಸ್ತುವೂ ಜಗತ್ತಿನಲ್ಲಿ ಇರುವುದಿಲ್ಲ. ಕೊಡುವ ಮನಸ್ಸಿದ್ದರೆ ಏನನ್ನಾದರೂ ಕೊಡಬಹುದು. ವಸ್ತುವನ್ನು ಕೊಡಲಾಗದಿದ್ದರೆ ಉತ್ತಮ ವಿಚಾರವನ್ನು ಸಮಾಜಕ್ಕೆ ಕೊಡಬಹುದು. ಹೀಗೆ ಮಾಡಿದ ದಾನವು ಅವನಿಗೆ ಇದ್ದಲ್ಲಿಯೇ ತೀರ್ಥಸ್ನಾನದ ಫಲವನ್ನು ಕೊಡುತ್ತದೆ. ಅಂತೆಯೇ ದಾನವೂ ಕೂಡ ಒಂದು ತೀರ್ಥವೆಂದು ಕರೆಯಲಾಗಿದೆ.