ಮಂತ್ರ: ಪ್ರತಿಯೊಂದು ಮಂತ್ರವೂ ಆದಿಶಬ್ದ (ಪದ) ಅಥವಾ ‘ಶಬ್ದಬ್ರಹ್ಮ’ದ ಒಂದು ರೂಪವಾಗಿದೆ; ಹಾಗೂ ಅದರ ಅರ್ಥವಾಗಿ ಒಬ್ಬ ದೇವತೆಯನ್ನೋ ಅಥವಾ ದೇವಿಯನ್ನೋ ಪ್ರತಿನಿಧಿಸುತ್ತದೆ ಎಂದು ಭಾವಿಸುವುದೂ ತರ್ಕಬದ್ಧವಾಗಿದೆ. ಈ ದೇವಿ ದೇವತೆಗಳಾದರೂ ಯಾರು? ಆ ಬ್ರಹ್ಮದ ವ್ಯಕ್ತರೂಪ ಅಥವಾ ಅದರಿಂದ ಹೊರಹೊಮ್ಮಿದವರು ತಾನೇ? ಬೇರೊಂದು ಬಗೆಯಲ್ಲಿ ಹೇಳುವುದಾದರೆ, ಒಂದು ದೇವಿಯ / ದೇವತೆಯ ಮಂತ್ರದಲ್ಲಿ,
ಆ ಮಂತ್ರವು ತನ್ನೊಳಗೆ ಆ ದೇವಿಯ / ದೇವತೆಯ ರೂಪ ಹಾಗೂ ಶಕ್ತಿಯನ್ನು ಒಳಗೊಂಡಿದೆಯೆಂದೇ ಅರ್ಥ. ಸೂಕ್ತ ರೀತಿಯಲ್ಲಿ ಮಂತ್ರವನ್ನು ಜಪಿಸುವುದರಿಂದ ಕಾಲಕ್ರಮದಲ್ಲಿ ಈ ಮಂತ್ರದೇವತೆಯು ದರ್ಶನ ನೀಡುತ್ತದೆ.
ತಂತ್ರಗಳು, ಮಂತ್ರಗಳನ್ನು ಸೌರ (ಸೂರ್ಯ) ಮತ್ತು ಸೌಮ್ಯ (ಚಂದ್ರ) ಮಂತ್ರಗಳೆಂದು ವಿಭಾಗಿಸಿವೆ. ಮಂತ್ರಗಳು ಪುರುಷ, ಸ್ತ್ರೀ, ಹಾಗೂ ತಟಸ್ಥ ಮಂತ್ರಗಳಾಗಿರಬಹುದು. ಪುರುಷ ಹಾಗೂ ತಟಸ್ಥಮಂತ್ರಗಳನ್ನು ‘ಮಂತ್ರ’ವೆಂದೂ, ಸ್ತ್ರೀಮಂತ್ರಗಳನ್ನು ‘ವಿದ್ಯಾ’ ಎಂದೂ ಕರೆಯುತ್ತಾರೆ.