ಅಹಮದಾಬಾದ್: ಡೊನಾಲ್ಡ್ ಟ್ರಂಪ್ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಗಾಂಧಿನಗರಕ್ಕೆ ಹೋಗುವ ಮಾರ್ಗದ ನಡುವೆ ಸುಮಾರು ಅರ್ಧ ಕಿ.ಮೀ ಉದ್ದಕ್ಕೂ ಅಹಮದಾಬಾದ್ ಮಹಾನಗರ ಪಾಲಿಕೆ ಗೋಡೆ ನಿರ್ವಿುಸುತ್ತಿದೆ.
ಈ ಮಾರ್ಗದಲ್ಲಿ ಕೊಳೆಗೇರಿಗಳಿದ್ದು, ಈ ದೃಶ್ಯಗಳು ಟ್ರಂಪ್ಗೆ ಗೋಚರಿಸಬಾರದೆಂದು ಅಹಮದಾಬಾದ್ನ ನಗರಪಾಲಿಕೆ ಗೋಡೆ ನಿರ್ಮಾಣ ಮಾಡುತ್ತಿದೆ ಎಂದು ತಿಳಿದುಬಂದಿದೆ. ಸರ್ದಾರ್ ವಲ್ಲಭಭಾಯ್ ಪಟೇಲ್ ವಿಮಾನ ನಿಲ್ದಾಣದಿಂದ ಇಂದಿರಾ ಸೇತುವೆವರೆಗೆ ಸುಮಾರು 7 ಅಡಿ ಎತ್ತರದ ಗೋಡೆ ನಿರ್ವಿುಸಲಾಗುತ್ತಿದೆ.