ನ್ಯೂಸ್

ರನ್​ ವೇ ದಲ್ಲಿ ನಿಂತಿದ್ದ ವಿಮಾನಕ್ಕೆ ಡಿಕ್ಕಿ ಹೊಡೆದ ಮತ್ತೊಂದು ವಿಮಾನ! | Plane

Plane: ಅಮೆರಿಕದ ಮಾಂಟಾನಾದ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಅಪಘಾತವೊಂದು ಸಂಭವಿಸಿದೆ.

ಕೆಳಗೆ ಇಳಿಯುತ್ತಿದ್ದ ಸಣ್ಣ ವಿಮಾನವು ನಿಂತಿದ್ದ ಮತ್ತೊಂದು ವಿಮಾನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ದೊಡ್ಡ ಬೆಂಕಿ ಕಾಣಿಸಿಕೊಂಡಿದೆ. ಆದಾಗ್ಯೂ, ಅಪಘಾತದಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫೆಡರಲ್ ವಿಮಾನಯಾನ ಆಡಳಿತದ ಪ್ರಕಾರ, 4 ಪ್ರಯಾಣಿಕರಿದ್ದ ಏಕ ಎಂಜಿನ್ ವಿಮಾನವು ಮಧ್ಯಾಹ್ನ 2 ಗಂಟೆಗೆ ಕಾಲಿಸ್ಪೆಲ್ ಸಿಟಿ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿತ್ತು. ಸೊಕಾಟಾ ಟಿಬಿಎಂ 700 ಟರ್ಬೊಪ್ರಾಪ್ ವಿಮಾನವು ನೆಲದ ಮೇಲಿದ್ದ ಖಾಲಿ ವಿಮಾನಕ್ಕೆ ಡಿಕ್ಕಿ ಹೊಡೆದಾಗ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ತಕ್ಷಣವೇ ದೊಡ್ಡ ಬೆಂಕಿ ಕಾಣಿಸಿಕೊಂಡಿತು ಮತ್ತು ಇಡೀ ಪ್ರದೇಶವು ಹೊಗೆಯಿಂದ ಆವೃತವಾಗಿತ್ತು. ಆದರೆ, ಕೆಳಗಿದ್ದ ವಿಮಾನದಲ್ಲಿ ಯಾರು ಪ್ರಯಾಣಿಕರು ಇರಲಿಲ್ಲ ಎಂದು ಕಾಲಿಸ್ಪೆಲ್ ಪೊಲೀಸ್ ಮುಖ್ಯಸ್ಥ ಜೋರ್ಡಾನ್ ವೆನೆಜಿಯಾ ತಿಳಿಸಿದ್ದಾರೆ.

ಪೈಲಟ್​, ಪ್ರಯಾಣಿಕರು ಸುರಕ್ಷಿತ

ಮೊಂಟಾನಾ ವಿಮಾನ ನಿಲ್ದಾಣವು 30,000 ಜನಸಂಖ್ಯೆ ಹೊಂದಿರುವ ಕಾಲಿಸ್ಪೆಲ್ ನಗರದ ದಕ್ಷಿಣದಲ್ಲಿದೆ. ವಿಮಾನವು ಇಳಿಯಲು ಪ್ರಯತ್ನಿಸುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಪೈಲಟ್ ಮತ್ತು ಮೂವರು ಪ್ರಯಾಣಿಕರು ವಿಮಾನದಿಂದ ಸುರಕ್ಷಿತವಾಗಿ ಹೊರ ಬಂದಿದ್ದಾರೆ. ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ವಿಮಾನ ನಿಲ್ದಾಣದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​​)