ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದಲ್ಲಿರುವ ಶನೈಶ್ವರಸ್ವಾಮಿ ದೇಗುಲ. 
ನ್ಯೂಸ್

ಶನೈಶ್ಚರಸ್ವಾಮಿಗೆ ವಾರ್ಷಿಕ ಮಹಾ ಕುಂಭಾಭಿಷೇಕ ಇಂದು

ಯಳಂದೂರು: ತಾಲೂಕಿನ ಗಣಿಗನೂರು ಗ್ರಾಮದಲ್ಲಿರುವ ಪ್ರಸಿದ್ಧ ಶ್ರೀಸನೈಶ್ಚರ ಸ್ವಾಮಿಯ ದೇಗುಲದಲ್ಲಿ 23ನೇ ವರ್ಷದ ವಾರ್ಷಿಕ ಮಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿದ್ದು ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೆಳಗ್ಗೆ ಕಳಸ ಸ್ಥಾಪನೆ, ನವಗ್ರಹ ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಂತರ ಮಧ್ಯಾಹ್ನ ಪ್ರಸಾದ ವಿನಿಯೋಗ ನಡೆಯಲಿದೆ. ಶಿವರಾಜು ಕೂಗಲೂರು ರವರಿಂದ ರಾಜವಿಕ್ರಮ ಅಥವಾ ಶನಿಪ್ರಭಾವ ಎಂಬ ಹರಿಕಥೆಯನ್ನು ಏರ್ಪಡಿಸಲಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೃಷ್ಣರಾಜು ತಮ್ಮಡಿ ಮನವಿ ಮಾಡಿದ್ದಾರೆ.