ನ್ಯೂಸ್

ಸೆಪ್ಟೆಂಬರ್‌ನಿಂದಲೇ ಹೆಚ್ಚುವರಿ ತಲಾ ಐದು ಕೆಜಿ ಅಕ್ಕಿ ಭಾಗ್ಯ ?

ಬೆಂಗಳೂರು: ರಾಜ್ಯ ಸರ್ಕಾರದ ಷರತ್ತಿನ ಪ್ರಕಾರ ಎ್ಸಿಐ ನಿಗದಿಪಡಿಸಿದ ದರಕ್ಕೆ ಅಕ್ಕಿ ಪೂರೈಸಲು ಆಂಧ್ರಪ್ರದೇಶ ಸರ್ಕಾರ ಮುಂದೆ ಬಂದಿದೆ ಎನ್ನಲಾಗಿದ್ದು, ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿ ತಲಾ ಐದು ಕೆಜಿ ವಿತರಣೆ ಸಮಸ್ಯೆ ಬೇಗ ಬಗೆಹರಿಯುವ ಲಕ್ಷಣ ಗೋಚರಿಸಿವೆ.

ರಾಜ್ಯದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಆಂಧ್ರದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕಾರುಮುರಿ ವೆಂಕಟನಾಗೇಶ್ವರರಾವ್ ನೇತೃತ್ವದ ನಿಯೋಗ ಶುಕ್ರವಾರ ಭೇಟಿ ಮಾಡಿ ಮಾತುಕತೆ ನಡೆಸಿ, ಪೂರೈಸಲಿರುವ ಅಕ್ಕಿ ನಮೂನೆಯನ್ನೂ ತೋರಿಸಿತು.

ಎ್ಸಿಐ ದರದಲ್ಲಿ ಅಕ್ಕಿ ಪೂರೈಸಲು ಅವಕಾಶ ನೀಡಬೇಕು. ಜತೆಗೆ ನಿರ್ದಿಷ್ಟ ಪ್ರಮಾಣವನ್ನು ತಿಳಿಸಬೇಕು. ಸಾಧ್ಯವಾದಷ್ಟು ಬೇಗ ಅನುಮತಿ ನೀಡಿದರೆ ಪೂರಕ ಸಿದ್ಧತೆಗೆ ಅನುಕೂಲವಾಗುತ್ತದೆ ಎಂದು ನಿಯೋಗ ಮನವಿ ಮಾಡಿಕೊಂಡಿದೆ.

ಮಾತುಕತೆ ವಿವರಗಳನ್ನು ಮುಖ್ಯಮಂತ್ರಿ ಗಮನಕ್ಕೆ ತಂದು ಅವರ ಒಪ್ಪಿಗೆ ಪಡೆದು ನಂತರ ಮಾಹಿತಿ ನೀಡುವುದಾಗಿ ನಿಯೋಗಕ್ಕೆ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶ ಜತೆಗೆ ತೆಲಂಗಾಣ ಸರ್ಕಾರವು ‘ಅನ್ನಭಾಗ್ಯ’ ಯೋಜನೆಗೆ ಬೇಕಾದ ಅಕ್ಕಿ ಪೂರೈಸಲು ಕಳೆದ ವಾರ ಸಂಪರ್ಕಿಸಿ ಆಸಕ್ತಿವ್ಯಕ್ತಪಡಿಸಿದ್ದವು. ಎ್ಸಿಐ ನಿಗದಿತ ದರಕ್ಕೆ ಪೂರೈಸಲು ಒಂದು ವಾರದೊಳಗೆ ಒಪ್ಪಿಗೆ ಸೂಚಿಸಿದರೆ ಮುಂದಿನ ಕ್ರಮವಹಿಸಲಾಗುವುದು ಎಂದು ಉಭಯ ಸರ್ಕಾರಗಳಿಗೆ ಮುನಿಯಪ್ಪ ತಿಳಿಸಿದ್ದರು.

ಆಂಧ್ರ ತ್ವರಿತ ಸ್ಪಂದನೆ

ತೆಲಂಗಾಣಕ್ಕಿಂತ ಮುಂಚೆಯೇ ಆಂಧ್ರಪ್ರದೇಶದ ಜಗನ್‌ಮೋಹನ್‌ರೆಡ್ಡಿ ನೇತೃತ್ವದ ಸರ್ಕಾರ ಸ್ಪಂದಿಸಿ, ಎ್ಸಿಐ ದರಕ್ಕೆ ಒಪ್ಪಿಕೊಂಡಿರುವುದನ್ನು ರಾಜ್ಯ ಸರ್ಕಾರಕ್ಕೆ ತಿಳಿಸಲು ಸಂಬಂಧಿಸಿದ ಇಲಾಖೆ ಸಚಿವರ ನೇತೃತ್ವದ ನಿಯೋಗವನ್ನೇ ಬೆಂಗಳೂರಿಗೆ ಕಳುಹಿಸಿದೆ.

ಆಂಧ್ರಪ್ರದೇಶ ಸಚಿವರ ನೇತೃತ್ವದ ನಿಯೋಗ ಭೇಟಿಯಾಗಿ ಮಾತುಕತೆ ನಡೆಸಿರುವುದನ್ನು ಸಚಿವ ಕೆ.ಎಚ್.ಮುನಿಯಪ್ಪ ಅವರ ಕಚೇರಿ ಮೂಲಗಳು ಖಚಿತಪಡಿಸಿದ್ದು, ಪೂರೈಕೆ ಪ್ರಮಾಣ, ನಿಗದಿತ ದರ ಇತ್ಯಾದಿ ವಿವರಗಳನ್ನು ಹಂಚಿಕೊಂಡಿಲ್ಲ.

ಎ್ಸಿಐ ಪ್ರತಿ ಕ್ವಿಂಟಾಲ್‌ಗೆ 34 ರೂ. ದರ ನಿಗದಿಪಡಿಸಿದೆ. ಹೆಚ್ಚುವರಿ ಐದು ಕೆಜಿ ಅಕ್ಕಿ ವಿತರಿಸಲು ಮಾಸಿಕ 2.40 ಲಕ್ಷ ಟನ್ ಅಗತ್ಯವಿದೆ. ಆಂಧ್ರದ ಪ್ರಸ್ತಾವನೆಗೆ ಸಿಎಂ ಸಮ್ಮತಿಸಿದರೆ, ಸೆಪ್ಟೆಂಬರ್‌ನಲ್ಲಿ ಲಾನುಭವಿಗಳಿಗೆ ನಗದು ಮೊತ್ತದ ಬದಲು ಅಕ್ಕಿ ಪೂರೈಕೆ ಸಾಧ್ಯತೆಗಳಿವೆ.