ನ್ಯೂಸ್

ಸ್ಮಾರ್ಟ್​ ಜೋಡಿ ಗೆದ್ದ ಅಂಕಿತಾ-ವಿಕ್ಕಿ ಜೈನ್​ ದಂಪತಿಗೆ ಭಾರೀ ಮೊತ್ತದ ಬಹುಮಾನ

ಮುಂಬೈ: ಹಿಂದಿ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದ ಸ್ಮಾರ್ಟ್​ ಜೋಡಿ ರಿಯಾಲಿಟಿ ಶೋ ವಿಜೇತರಾಗಿ ಖ್ಯಾತ ಕಿರುತೆರೆ ನಟಿ ಅಂಕಿತಾ ಲೊಖಂಡೆ ಹಾಗೂ ಪತಿ ವಿಕ್ಕಿ ಜೈನ್​​ ವಿನ್ನರ್​ ಆಗಿದ್ದಾರೆ.

ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದ ಈ ಶೋ ಕೊನೆಗೂ ತನ್ನ ವಿನ್ನರ್​​ ದಂಪತಿಯನ್ನು ಘೋಷಿಸಿದ್ದು, ಟ್ರೋಫಿ ಜತೆಗೆ ಭಾರೀ ಮೊತ್ತದ ಬಹುಮಾನವನ್ನು ನೀಡಿದೆ. ಭಾಗ್ಯ ಶ್ರೀ ದಂಪತಿ ಸೇರಿದಂತೆ ಇತರೆ ಕಲಾವಿದರು ಪಾಲ್ಗೊಂಡಿದ್ದರು. ಗಂಡ-ಹೆಂಡತಿಗಾಗಿಯೇ ಮೀಸಲಿಟ್ಟಿದ್ದ ವಿಶೇಷ ಶೋ ಇದಾಗಿತ್ತು. 

ಈ ಶೋ ಮೂಲಕ ಈ ಜೋಡಿಗಳು ತಮ್ಮ ವೈವಾಹಿಕ ಜೀವನದ ಏಳು-ಬೀಳುಗಳನ್ನು ಸ್ಮರಿಸಿಕೊಂಡಿದ್ದರು. ಇನ್ನು ಗೆಲುವಿನ ಬಗ್ಗೆ ತುಂಬಾ ಸಂತಸ ವ್ಯಕ್ತಪಡಿಸಿರವ ಅಂಕಿತಾ ಲೊಖಂಡೆ ಕೆಲವು ದಿನಗಳಿಂದ ಶೋ ಗಾಗಿ ಸಾಕಷ್ಟು ಸಮಯ ಕೊಟ್ಟಿದ್ದೆವು. ಕೊನೆಗೂ ಪ್ರತಿಫಲ ಸಿಕ್ಕಿದೆ ಎಂದು ಹೇಳಿಕೊಂಡಿದ್ದಾರೆ. ಇನ್ನು ವಿಜೇತರಾದ ಈ ದಂಪತಿಗೆ ಬರೋಬ್ಬರಿ 25 ಲಕ್ಷ ರೂ. ಬಹುಮಾನ ಸಿಕ್ಕಿದೆ.

ನೇಲ್​ ಭಟ್​- ಐಶ್ವರ್ಯಾ, ಖ್ಯಾತ ಗಾಯಕ ಅಂಕಿತ್​ ತಿವಾರಿ ಪತ್ನಿ ಪಲ್ಲವಿ, ರಾಹುಲ್​ ಮಹಾಜನ್​- ನತ್ಯಾಲಾ, ಭಾಗ್ಯ ಶ್ರೀ, ಪತಿ ಹಿಮಾಲಯ್​ ಸೇರಿದಂತೆ ಒಟ್ಟು 10 ಜೋಡಿಗಳು ಈ ಶೋನಲ್ಲಿ ಪಾಲ್ಗೊಂಡಿದ್ದವು. (ಏಜೆನ್ಸೀಸ್​)