ಮುಂಬೈ: ಅಂಕಿತಾ ಲೋಖಂಡೆ ಗರ್ಭಿಣಿಯೇ?... ಬಿಗ್ಬಾಸ್ ತಯಾರಕರು ಹೊಸ ಪ್ರೋಮೋ ವಿಡಿಯೋವನ್ನು ಬಿಡುಗಡೆ ಮಾಡಿದ ನಂತರ ಈ ಪ್ರಶ್ನೆಯು ಇದೀಗ ಎಲ್ಲರ ಮನಸ್ಸಿನಲ್ಲಿ ಓಡುತ್ತಿದೆ. ಅಂಕಿತಾ ತನಗೆ ಹುಳಿ ತಿನಬೇಕೆಂದು ಅನಿಸುತ್ತಿದೆ ಎಂದು ಹೇಳುವ ಕೆಲವು ವಿಡಿಯೋ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ತನಗೆ ಏನೋ ಆಗಿದೆ ಎಂದು ಹೇಳುವ ಅಂಕಿತಾ ತನ್ನ ಕುಟುಂಬ ಸದಸ್ಯರೊಂದಿಗೆ ಈ ಬಗ್ಗೆ ಬಹಿರಂಗವಾಗಿ ಮಾತನಾಡುತ್ತಿರುವುದು ಕಂಡುಬಂದಿದೆ. ಈ ಬಾರಿ ತನಗೆ ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳುತ್ತಿರುವುದನ್ನೂ ಕಾಣಬಹುದು. ಈ ಮಾತನ್ನು ಕೇಳಿದ ನಂತರ, ಕುಟುಂಬ ಸದಸ್ಯರು ಆಕೆಯೊಂದಿಗೆ ಗರ್ಭಧಾರಣೆಯ ಬಗ್ಗೆ ಮಾತನಾಡುತ್ತಿರುವುದು ಕಂಡುಬರುತ್ತದೆ.
ಪ್ರೋಮೋ ವಿಡಿಯೋದಲ್ಲಿ ಅಂಕಿತಾ, 'ನನಗೆ ತುಂಬಾ ಹುಳಿ ತಿನಬೇಕೆಂದು ಅನಿಸುತ್ತಿದೆ, ನಾನು ಸುಳ್ಳು ಹೇಳುತ್ತಿಲ್ಲ. ಏನೋ ಸಮಸ್ಯೆ ಆಗುತ್ತಿದೆ ಎಂದು ನಾನು ಭಾವಿಸುತ್ತೇನೆ' ಎಂದು ಹೇಳುತ್ತಾರೆ. ಆಗ ರಿಂಕು ಧವನ್ 'ಒಳ್ಳೆಯ ಸಮಸ್ಯೆಯೇ ಆಗಿದೆ' ಎನ್ನುತ್ತಾರೆ. ಕೊನೆಗೆ ಅಂಕಿತಾ 'ಅದರ ಬಗ್ಗೆ ಯೋಚಿಸುವಾಗಲೂ ನನಗೆ ತುಂಬಾ ಭಯವಾಗುತ್ತಿದೆ' ಎಂದಾಗ ಮುಖದ ಹೊಳಪಿನ ಬಗ್ಗೆ ಹಾಗೂ ಇತರ ವಿಯಗಳ ಬಗ್ಗೆ ರಿಂಕು ಮಾತನಾಡುವುದನ್ನೂ ನೋಡಬಹುದು.
ಅಂಕಿತಾ ವಿಕ್ಕಿ ಜೈನ್ ಅವರೊಂದಿಗೆ ಮಾತನಾಡುತ್ತಿರುವ ಮತ್ತೊಂದು ವಿಡಿಯೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಪ್ರೆಗ್ನೆನ್ಸಿ ಬಗ್ಗೆಯೂ ಮಾತನಾಡುತ್ತಾ, ತನ್ನ ಮೂತ್ರ ಪರೀಕ್ಷೆಯ ಬಗ್ಗೆಯೂ ಮಾತನಾಡುತ್ತಾರೆ. ನನಗೆ ಏನೋ ಆಗುತ್ತಿದೆ. ನಾನು ಗೊಂದಲಕ್ಕೊಳಗಾಗಿದ್ದೇನೆ ಎಂದೆಲ್ಲಾ ಹೇಳುವುದನ್ನು ನಾವು ನೋಡಬಹುದು.
ವರದಿಗಳು ಇನ್ನೂ ಬರಬೇಕಿದೆ
ಈ ವಿಡಿಯೋದಲ್ಲಿ ಅಂಕಿತಾ ತನ್ನ ಗರ್ಭಧಾರಣೆಯ ನಿರೀಕ್ಷೆಯಲ್ಲಿದ್ದಾರೆ. ಆಕೆಗೆ ಪಿರಿಯಡ್ಸ್ ಕೂಡ ಆಗಿಲ್ಲ. ಇತ್ತೀಚೆಗೆ ಮೂತ್ರ ಪರೀಕ್ಷೆ ಮಾಡಿಸಲಾಗಿದೆ, ಅದರ ವರದಿಗಳು ಇನ್ನೂ ಬರಬೇಕಾಗಿದೆ ಎಂದು ಅವರು ಹೇಳುತ್ತಾರೆ. ಒಟ್ಟಾರೆ ನಾನು ತುಂಬಾ ಅಸಮಾಧಾನಗೊಂಡಿದ್ದೇನೆ, ನನಗೆ ಅರ್ಥವಾಗುತ್ತಿಲ್ಲ ಎಂದು ಅಂಕಿತಾ ತಿಳಿಸಿದ್ದಾರೆ.
'ಬಿಗ್ ಬಾಸ್' ಇತಿಹಾಸದಲ್ಲಿ ಇದೇ ಮೊದಲು
ಇದು ನಿಜವೆಂದು ಸಾಬೀತಾದರೆ, 'ಬಿಗ್ ಬಾಸ್' ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಪ್ರವೇಶಿಸಿದ ನಂತರ ಸ್ಪರ್ಧಿಯೊಬ್ಬರು ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಡುತ್ತದೆ. ಆದರೆ, ಈ ಸುದ್ದಿ ನಿಜವಾಗಲಿ ಎಂದು ಕುಟುಂಬ ಸದಸ್ಯರೊಂದಿಗೆ ಹಲವು ಅಭಿಮಾನಿಗಳು ಹಾರೈಸುತ್ತಿದ್ದಾರೆ.