ಪಾಂಡವಪುರ ಪಟ್ಟಣದ ಬೀರಶೆಟ್ಟಹಳ್ಳಿ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗ ಪ್ರತಿಷ್ಠಾಪಿಸಲು ನಿರ್ಮಾಣ ಮಾಡುತ್ತಿರುವ ಆಂಜನೇಯಸ್ವಾಮಿ ಏಕಶಿಲಾ ಮೂರ್ತಿ ಕೆತ್ತನೆ ಕೆಲಸಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಗ್ರಾಮದ ಯಜಮಾನರು, ಮುಖಂಡರು ಇದ್ದರು. 
ನ್ಯೂಸ್

ಆಂಜನೇಯಸ್ವಾಮಿ ಮೂರ್ತಿ ಕೆತ್ತನೆಗೆ ಚಾಲನೆ

ಎಂ.ರವಿ

ಪಾಂಡವಪುರ: ಪಟ್ಟಣದ ಬೀರಶೆಟ್ಟಹಳ್ಳಿಯ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ನಿರ್ಮಿಸುತ್ತಿರುವ 25 ಅಡಿ ಎತ್ತರದ ಬಿಳಿ ಕಲ್ಲಿನ ಏಕಶಿಲಾ ಆಂಜನೇಸ್ವಾಮಿ ಮೂರ್ತಿ ಕೆತ್ತನೆ ಕೆಲಸಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಶುಕ್ರವಾರ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಬೀರಶೆಟ್ಟಹಳ್ಳಿ ಗ್ರಾಮಸ್ಥರು, ಭಕ್ತಾದಿಗಳು ಹಾಗೂ ದಾನಿಗಳ ಸಹಕಾರದಿಂದ ಆಂಜನೇಯಸ್ವಾಮಿ ಶಿಲಾ ಮೂರ್ತಿ ಕೆತ್ತನೆ ಕೆಲಸ ಪ್ರಾರಂಭವಾಗಿದ್ದು, ಶೀಘ್ರ ಕೆತ್ತನೆ ಕೆಲಸ ಮುಗಿದು ಮೂರ್ತಿ ಪ್ರತಿಷ್ಠಾಪನೆಯ ಧಾರ್ಮಿಕ ಕೆಲಸ ನಡೆಯಲಿ ಎಂಬುದು ನಮ್ಮ ಆಶಯ. ಸ್ವಾಮಿಯ ಶಿಲಾ ಮೂರ್ತಿ ನಿರ್ಮಾಣಕ್ಕೆ ಲಕ್ಷಾಂತರ ರೂ. ವೆಚ್ಚ ತಗಲಲಿದ್ದು, ಸರ್ಕಾರದಿಂದ ದೇವರ ಮೂರ್ತಿ ಕೆತ್ತನೆ ಕೆಲಸಕ್ಕೆ ಸಾಧ್ಯವಾದಷ್ಟು ಅನುದಾನ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ಶ್ರೀ ಮಾರಮ್ಮ ದೇವಿ ಸೇವಾ ಸಮಿತಿ ಗೌರವಾಧ್ಯಕ್ಷ ದೇವೇಗೌಡ, ಅಧ್ಯಕ್ಷ ಸಿದ್ದೇಗೌಡ, ಖಜಾಂಚಿ ಕೆ.ಕೃಷ್ಣ (ಜಲೀಲ್) ಕಾರ್ಯದರ್ಶಿಗಳಾದ ಎಸ್.ವಸಂತಕುಮಾರ್, ಪಿ.ಮಂಜುನಾಥ್, ಕೆ.ಗಿರೀಶ್, ಯಜಮಾನರಾದ ಸಿದ್ದೇಗೌಡ, ತಮ್ಮೇಗೌಡ, ಶಂಕರ, ಹೊನ್ನೇಗೌಡ, ಬಾಲಗಂಗಾಧರ್, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಪಿ.ಶಿವಣ್ಣ, ಎಂ.ಶಿವಣ್ಣ ಇತರರು ಇದ್ದರು.