Priyanka Chopra surgery: ನಿರ್ದೇಶಕ ಅನಿಲ್ ಶರ್ಮಾ ಅವರು ನಟಿ ಪ್ರಿಯಾಂಕಾ ಚೋಪ್ರಾ ಅವರ ಮೂಗಿನ ಸರ್ಜರಿ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಅವರು ಮೂಗಿನ ಸರ್ಜರಿ ಮಾಡಿಸಿಕೊಂಡ ನಂತರ ಆದಂತಹ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.
2003ರಲ್ಲಿ ಅನಿಲ್ ಶರ್ಮಾ ಅವರು ಪ್ರಿಯಾಂಕಾ ಜೊತೆ ದಿ ಹೀರೋ: ದಿ ಲವ್ಸ್ಟೋರಿ ಆಫ್ ಎ ಸ್ಪೈ ಸಿನಿಮಾ ಮಾಡಿದ್ದರು. ನಟಿಯ ಕಠಿಣ ಶ್ರಮದ ಬಗ್ಗೆ ಅವರು ಮಾತನಾಡಿದ್ದಾರೆ. ಹಲವಾರು ಸಿನಿಮಾಗಳಿಂದ ಪ್ರಿಯಾಂಕಾ ಅವರನ್ನು ಕೈಬಿಟ್ಟಾಗ ಇಂಡಸ್ಟ್ರಿ ಬಿಡುವ ಬಗ್ಗೆ ಯೋಚಿಸಿದ್ರಂತೆ ನಟಿ.
ಪ್ರಿಯಾಂಕಾ ಮೂಗಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಇದರಿಂದಾಗಿ ಅವರ ಮುಖವು ತುಂಬಾ ಭಯಾನಕವಾಗಿ ಕಾಣಲಾರಂಭಿಸಿತು ಎಂದು ಅವರು ಹೇಳಿದರು. ಶಸ್ತ್ರಚಿಕಿತ್ಸೆಯ ನಂತರ ಮೊದಲ ಬಾರಿಗೆ ಪ್ರಿಯಾಂಕಾ ಅವರನ್ನು ನೋಡಿದಾಗ ಅವರು ದಿಗ್ಭ್ರಮೆಗೊಂಡರು.
ನಂತರ ಪ್ರಿಯಾಂಕಾಗೆ ಕರೆ ಮಾಡಿ ಆಕೆ ಯಾಕೆ ಹೀಗೆ ಮಾಡಿದಳು ಎಂದು ಕೇಳಿದ್ದಾಗಿ ಅನಿಲ್ ಶರ್ಮಾ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ಅವರ ಕಚೇರಿಗೆ ಬಂದು ಇದಕ್ಕೆ ಕಾರಣವನ್ನು ವಿವರಿಸಿದರು. ನಂತರ ತುಂಬಾ ಅಳುತ್ತಾರೆ. ಅವರು ಸೈನಸ್‌ನಿಂದ ಬಳಲುತ್ತಿರುವುದಾಗಿ ಹೇಳಿದರು. ಆದ್ದರಿಂದ ಮೂಗಿನ ಶಸ್ತ್ರಚಿಕಿತ್ಸೆಯನ್ನು ಮಾಡದೆ ಬೇರೆ ದಾರಿಯಿರಲಿಲ್ಲ ಎಂದರು.
ಮೂಗಿನ ಮೇಲೆ ಈ ಕಲೆ ಇಂದಿಗೂ ಉಳಿದುಕೊಂಡಿದೆ. ಮೂಗಿನ ಶಸ್ತ್ರಚಿಕಿತ್ಸೆಯಿಂದಾಗಿ ಹಲವು ಚಿತ್ರಗಳಿಂದ ಕೈಬಿಡಲ್ಪಟ್ಟ ಕಾರಣ ಅವರು ಮುಂಬೈ ತೊರೆದು ಬರೇಲಿಗೆ ಮರಳಲು ನಿರ್ಧರಿಸಿದ್ದರು. ತಾನು ತೆಗೆದುಕೊಂಡಿದ್ದ ಅಡ್ವಾನ್ಸ್‌ನ್ನು ಹಿಂದಿರುಗಿಸಲು ಸಹ ಯೋಚಿಸಿದ್ದರಂತೆ.
ಆದರೆ ಕಷ್ಟದ ಸಮಯದಲ್ಲಿ ಅನಿಲ್ ಶರ್ಮಾ ಅವರ ಕೈ ಬಿಡಲಿಲ್ಲ. ಅವರು ಮೇಕಪ್ ಕಲಾವಿದರ ಸಹಾಯದಿಂದ ಪ್ರಿಯಾಂಕಾ ಅವರ ನೋಟವನ್ನು ಸರಿಪಡಿಸಿದರು ಮತ್ತು ಚಿತ್ರದ ಸಂಪೂರ್ಣ ಚಿತ್ರೀಕರಣವನ್ನು ಮಾಡಿದರು ಎನ್ನಲಾಗಿದೆ.