ಚೆನ್ನೈ: ಕಾಲಿವುಡ್ ಚಿತ್ರರಂಗದ ಉದಯೋನ್ಮುಖ ನಟಿಯಾಗಿ ಮಿಂಚು ಹರಿಸಲು ಸಿದ್ಧವಾಗಿರುವ ಸುಂದರಿ ಅನಿಕಾ ಸುರೇಂದ್ರನ್, 2007ರಲ್ಲೇ ಮಲಯಾಳಂ ಚಿತ್ರದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ಸಿನಿ ರಂಗಕ್ಕೆ ಪ್ರವೇಶ ಮಾಡಿದರು. ಅನೇಕ ಅವಕಾಶಗಳನ್ನು ಗಿಟ್ಟಿಸಿಕೊಂಡ ಅನಿಕಾಗೆ 2014ರಲ್ಲಿ ತೆರೆಕಂಡ ಎನ್ನೈ ಅರಿಂದಾಲ್ ಚಿತ್ರದಲ್ಲಿ ಕಾಲಿವುಡ್ ಸೂಪರ್ಸ್ಟಾರ್ ಅಜಿತ್ ಮಗಳಾಗಿ ನಟಿಸುವ ಮೂಲಕ ತುಂಬಾ ಖ್ಯಾತಿ ಗಳಿಸಿದರು.
ವಿಶ್ವಾಸಂ ಚಿತ್ರದಲ್ಲಿ ಮತ್ತೊಮ್ಮೆ ಅಜಿತ್ ಮಗಳಾಗಿ ಕಾಣಿಸಿಕೊಳ್ಳುವ ಮೂಲಕ ಭರವಸೆಯ ನಟಿ ಎಂಬ ಹೆಗ್ಗಳಿಕೆಗೂ ಅನಿಕಾ ಪಾತ್ರರಾದರು. ಅಜಿತ್ ಅಭಿಮಾನಿಗಳ ಬೆಂಬಲ ಪಡೆದಿರುವ ನಟಿಗೆ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಜಾಲತಾಣದಲ್ಲಿ ಸಕ್ರೀಯರಾಗಿರುವ ಅನಿಕಾ ಅನೇಕ ಫೋಟೋ ಮತ್ತು ವಿಡಿಯೋಗಳನ್ನು ಆಗಾಗ ಹರಿಬಿಟ್ಟು ಅಭಿಮಾನಿಗಳ ಮನವನ್ನು ತಣಿಸುತ್ತಾರೆ.
ಇದೇ ವೇಳೆ ಅನಿಕಾರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿದೆ. ಅನಿಕಾ ಅವರ ನೃತ್ಯ ತುಂಬಾ ಪ್ರಚೋದನಾಕಾರಿಯಾಗಿದೆ ಎಂದು ಟೀಕೆಗಳು ಕೇಳಿಬರುತ್ತಿವೆ. ವಿಡಿಯೋದಲ್ಲಿ ಅನಿಕಾ ಅವರು ಅರ್ಧಬರ್ಧಂ ಬಟ್ಟೆ ತೊಟ್ಟು ಎದೆ ಸೀಳು ಕಾಣುವಂತೆ ಮಾದಕ ನೃತ್ಯ ಮಾಡಿದಂತಿದೆ.
ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿರುವ ಅನಿಕಾ, ವಿಡಿಯೋದಲ್ಲಿ ನೃತ್ಯ ಮಾಡಿರುವುದು ನಾನಲ್ಲ. ಅದು ಎಡಿಟ್ ಮಾಡಿರುವ ವಿಡಿಯೋ ಇರಬಹುದಾಗಿದೆ. ಈ ವಿಡಿಯೋ ತುಂಬಾ ನೋವುಂಟು ಮಾಡಿದೆ. ವಿಡಿಯೋ ಕುರಿತು ಗಂಭೀರವಾಗಿ ಚಿಂತಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಅನಿಕಾ ಉದಯೋನ್ಮುಖ ನಟಿಯಾಗಿದ್ದು, ಕಾಲಿವುಡ್ ಚಿತ್ರರಂಗದಲ್ಲಿ ತುಂಬಾ ಭರವಸೆ ಮೂಡಿಸಿದ್ದಾರೆ. ವಿಜಯ್ ಸೇತುಪತಿ ಅಭಿನಯದ ಮಮಾನಿಥನ್ ಚಿತ್ರದಲ್ಲಿ ನಟಿಸಿದ್ದು ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್)
(ವಿಡಿಯೋ ಕೃಪೆ: ಅಪ್ಡೇಟ್ ಬಾಕ್ಸ್)