ಹರಪನಹಳ್ಳಿ: ತಾಲೂಕಿನ ಸಾಸ್ವಿಹಳ್ಳಿಯ ಸಹಾಯಕಿಯೊಬ್ಬರು ಅಂಗನವಾಡಿ ಧಾನ್ಯವನ್ನು ಕೊಡದಲ್ಲಿ ಮತ್ತು ಚೀಲದಲ್ಲಿ ಸಾಗಿಸುವಾಗ ಶುಕ್ರವಾರ ಗ್ರಾಮಸ್ಥರು ಹಿಡಿದು ಸಿಡಿಪಿಒಗೆ ಒಪ್ಪಿಸಿದ್ದಾರೆ.
ಅಂಗನವಾಡಿ ಕೇಂದ್ರದ ಅಕ್ಕಿ, ಬೇಳೆ, ಎಣ್ಣೆ ಮತ್ತಿತರ ಸಾಮಗ್ರಿಗಳನ್ನು ಚೀಲ, ಕೊಡಪಾನಗಳಲ್ಲಿ ತುಂಬಿಕೊಂಡು ಸಾಗಿಸುತ್ತಿದ್ದರು. ಇದನ್ನು ಪತ್ತೆ ಹಚ್ಚಿದ ಗ್ರಾಮಸ್ಥರು ತಡೆದು ಪರಿಶೀಲಿಸಿದಾಗ ಪಡಿತರ ಇರುವುದು ಪತ್ತೆಯಾಗಿದೆ.
ಈ ವಿಷಯವನ್ನು ದೂರವಾಣಿ ಮೂಲಕ ತಿಳಿಸಿದಾಗ ದೌಡಾಯಿಸಿ ಬಂದ ಇಲಾಖೆಯ ಮೇಲ್ವಿಚಾರಕಿ ಜಯಶ್ರೀ ಅವರು, ಗ್ರಾಮಸ್ಥರಿಂದ ದೂರು ಪಡೆದಿದ್ದಾರೆ.
ಇದನ್ನೂ ಓದಿ: ಶಾಲೆಗಳನ್ನು ತೆರೆಯಲು ತರಾತುರಿ ಇಲ್ಲ: ಸುರೇಶ್ಕುಮಾರ್
ಮಕ್ಕಳು, ಬಾಣಂತಿಯರು, ಗರ್ಭಿಣಿಯರಿಗೆ ಕೊಡಬೇಕಾದ ಧಾನ್ಯಗಳನ್ನು ಅಕ್ರಮವಾಗಿ ಸಾಗಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ವಿಷಯ ತಿಳಿದ ತಕ್ಷಣ ಇಲಾಖೆ ಸಿಬ್ಬಂದಿಯನ್ನು ಕಳಿಸಿ ವರದಿ ತರಿಸಿಕೊಳ್ಳಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಸಿಡಿಪಿಒ ಮಂಜುನಾಥ ತಿಳಿಸಿದರು.