ನ್ಯೂಸ್

ಸ್ತನ ಕ್ಯಾನ್ಸರ್​ ಕುರಿತು ಕಾಳಜಿ ವಹಿಸಿ; ಡಾ. ರತ್ನಪ್ರಭಾ

Haveri - Kariyappa Aralikatti

ರಾಣೆಬೆನ್ನೂರ: ಪ್ರತಿಯೊಬ್ಬ ಮಹಿಳೆಯರು ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್​ ರೋಗದ ಬಗ್ಗೆ ಕಾಳಜಿ ವಹಿಸಬೇಕು ಎಂದು ಆರೋಹಣಾ ಸಂಸ್ಥೆ ಅಧ್ಯೆ ಡಾ. ರತ್ನಪ್ರಭಾ ಹೇಳಿದರು.

ಇಲ್ಲಿಯ ವಾರ್ಡ್​ ನಂ. 10ರ ದೊಡ್ಡಪೇಟೆ, ರಂಗನಾಥ ಅಂಗನವಾಡಿ ಕೇಂದ್ರಗಳಲ್ಲಿ ಆರೋಹಣ ಸಂಸ್ಥೆ ವತಿಯಿಂದ ಏರ್ಪಡಿಸಿದ್ದ ಮಹಿಳಾ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಹಿಳೆಯರಿಗೆ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್​ ಕುರಿತು ಉಪನ್ಯಾಸ ನೀಡಿದರು.

ಮಹಿಳೆಯರಿಗೆ ಹೆಚ್ಚಾಗಿ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್​ ಕಾಣಿಸಿಕೊಳ್ಳುವುದು ಇತ್ತೀಚಿನ ದಿನದಲ್ಲಿ ಸಾಮಾನ್ಯವಾಗಿದೆ. ಮಹಿಳೆಯರು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಏನಾದರೂ ತೊಂದರೆ ಕಂಡು ಬಂದರೆ ಕೂಡಲೇ ವೈದ್ಯರಿಂದ ಸಲಹೆ ಪಡೆಯಬೇಕು ಎಂದರು.

ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ, ಪ್ರಮುಖರಾದ ಕಾವ್ಯ ವೀರನಗೌಡ್ರ, ರಾಜೇಶ್ವರಿ ಪಟ್ಟಣಶೆಟ್ಟಿ, ಪಾರ್ವತಮ್ಮ ರೊಡ್ಡನವರ, ರತ್ನವ್ವ ಹೊನ್ನತ್ತಿ, ಮಂಜುಳಾ ಹಿರೇಮಠ, ಮುಕ್ತಾ ಕೊಟ್ಟೂರ, ಪ್ರೇಮಾ ಹೊನ್ನತ್ತಿ, ವಿಜಯಲಕ್ಷಿ$್ಮ ಹಿರೇಮಠ ಮತ್ತಿತರರಿದ್ದರು.