ನ್ಯೂಸ್

ಶಾಲೆ, ಅಂಗನವಾಡಿಗಳಿಗೆ ಪೀಠೋಪಕರಣ ವಿತರಣೆ

ಎ. ಆರ್. ರಘುರಾಮ

ಹನಗೋಡು : ಸಮೀಪದ ಕಿರಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ 10 ಲಕ್ಷ ರೂ ವೆಚ್ಚದ ಪೀಠೋಪಕರಣ ಮತ್ತು ವಿವಿಧ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಿರಂಗೂರು ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆ ಹಾಗೂ ಸನ್ ರೈಸ್ ಕಂಪನಿ ವತಿಯಿಂದ 10 ಲಕ್ಷ ರೂ ವೆಚ್ಚದ ಪೀಠೋಪಕರಣ ವಿತರಿಸಿ ಮಾತನಾಡಿದ ಗ್ರಾಪಂ ಅಧ್ಯಕ್ಷ ಮಧು, ಮಾದಳ್ಳಿ, ಶಂಕರಪುರ, ವಿಜಯಗಿರಿ, ಕಿರಂಗೂರು, ಕಿರಂಗೂರು ಅಂಬೇಡ್ಕರ್ ಹೊಸೂರು, ಹರಳಹಳ್ಳಿ, ದಾಸನಪುರ, ಹಿಂಡಗುಡ್ಲು ಗ್ರಾಮದ ಶಾಲೆ ಹಾಗೂ ಅಂಗನವಾಡಿಗಳಿಗೆ ಡೆಸ್ಕ್, ಬ್ಯಾಂಡ್ ಸೆಟ್, ಕಪಾಟು, ತಟ್ಟೆ, ಲೋಟ, ಜಮಖಾನ, ಸಣ್ಣ ಕುರ್ಚಿಗಳು, ಮ್ಯಾಪ್ ಸೇರಿದಂತೆ ಕಲಿಕೆಗೆ ಪೂರಕವಾಗುವ ಸಾಮಗ್ರಿಗಳನ್ನು ನೀಡಲಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶಿಕ್ಷಣ ಪಡೆದು ಸಾಧನೆ ತೋರಬೇಕು ಎಂದು ಅವರು ಸಲಹೆ ನೀಡಿದರು. ಗ್ರಾಪಂ ಉಪಾಧ್ಯಕ್ಷ ಅಣ್ಣಯ್ಯ ಪಿಡಿಒ ಭವ್ಯಾ, ಸದಸ್ಯರಾದ ಹರೀಶ್, ರಾಮೇಗೌಡ, ಸ್ವಪ್ನಾ ಚಂದ್ರಶೇಖರ್, ನಂದಿನಿ. ಅನುಸೂಯ . ಉಮಾರಾಣಿ, ಮಂಜುನಾಥ್. ನಾಗೇಶ್ ಇತರರು ಇದ್ದರು.