ನ್ಯೂಸ್

ಮಾದಕವಸ್ತುಗಳ ಮಾರಣಹೋಮ: 850 ಕೋಟಿ ರೂ. ಬೆಲೆಬಾಳುವ ಮಾದಕ ದ್ರವ್ಯ ಭಸ್ಮ

ಆಂಧ್ರಪ್ರದೇಶ: ಕೆಟ್ಟದ್ದನ್ನು ಸುಟ್ಟು ಹಾಕಬೇಕು ಅಂತಾರೆ. ಅದೇ ಕೆಲಸವನ್ನು ಆಂಧ್ರಪ್ರದೇಶದ ಪೊಲೀಸರು ಮಾಡಿದ್ದು, ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಿದ್ದಾರೆ.

ಅಕ್ರಮ ಮದ್ಯ ವಶಪಡಿಸಿಕೊಂಡಾಗ ಪೊಲೀಸರು ಅದನ್ನು ರಸ್ತೆಯಲ್ಲಿ ಚೆಲ್ಲಿ ಅಥವಾ ಆ ಬಾಟಲಿಗಳನ್ನು ಧ್ವಂಸಗೊಳಿಸುತ್ತಾರೆ. ಇನ್ನು ಕಳಪೆ ಹೆಲ್ಮೆಟ್, ಕರ್ಕಶ ಶಬ್ದ ಹೊಮ್ಮಿಸುವ ಸೈಲೆನ್ಸರ್​ ವಶಪಡಿಸಿಕೊಂಡಾಗಲೂ ಪೊಲೀಸರು ಅವುಗಳನ್ನು ನಾಶ ಮಾಡುವ ಕೆಲಸ ಮಾಡುತ್ತಾರೆ.

ಅದೇ ರೀತಿ ಈಗ ಮಾದಕವಸ್ತುಗಳ ವಿಷಯದಲ್ಲೂ ಮಾಡಲಾಗಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಅನಕಪಲ್ಲಿ ಬಳಿಯ ಕೋಡೂರು ಗ್ರಾಮದಲ್ಲಿ ಬರೋಬ್ಬರಿ 850 ಕೋಟಿ ರೂ. ಬೆಲೆಬಾಳುವ ಮಾದಕ ವಸ್ತುಗಳನ್ನು ಸುಟ್ಟು ನಾಶ ಮಾಡಲಾಗಿದೆ.