ನ್ಯೂಸ್

ತೆಲುಗು ದೇಶಂ ಪಕ್ಷದ ಅಧ್ಯಕ್ಷರಾಗಿ ಶ್ರೀನಿವಾಸರಾವ್​ ಯಾದವ್ ನೇಮಕ!

ಅಮರಾವತಿ: ತೆಲುಗು ದೇಶಂ ಪಕ್ಷದ ವರಿಷ್ಠ ಮತ್ತು ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಗಾಜುವಾಕ ಶಾಸಕ ಪಿ. ಶ್ರೀನಿವಾಸರಾವ್​ ಯಾದವ್ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.

ವಿಶಾಖಪಟ್ಟಣಂ ಟಿಡಿಪಿ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಕೆಲಸ ಮಾಡಿದ ಯಾದವ್ ಅವರು ಹೊಸ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ಗಾಜುವಾಕ ಶಾಸಕ ಪಿ.ಶ್ರೀನಿವಾಸ್ ರಾವ್ ಯಾದವ್ ಅವರನ್ನು ಆಂಧ್ರಪ್ರದೇಶದ ಟಿಡಿಪಿ ಅಧ್ಯಕ್ಷರಾಗಿ ನೇಮಕ ಮಾಡುತ್ತಿದ್ದೇನೆ. ಇದುವರೆಗೆ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಿದ ಪಕ್ಷದ ಹಿರಿಯ ನಾಯಕ ಅಚ್ಚನಾಯ್ಡು ಅವರನ್ನು ಅಭಿನಂದಿಸುತ್ತೇನೆ ಎಂದು ನಾಯ್ಡು ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಎಕ್ಸ್‌ನಲ್ಲಿ ಖಾತೆಯಲ್ಲಿ ಹೊಸ ಅಧ್ಯಕ್ಷರ ನೇಮಕಾತಿ ಪತ್ರವನ್ನು ಹಂಚಿಕೊಂಡಿದ್ದಾರೆ.

ಟಿಡಿಪಿ ಅಧ್ಯಕ್ಷರಾಗಿದ್ದ ಅಚ್ಚನಾಯ್ಡು ಅವರು ಚಂದ್ರಬಾಬು ನಾಯ್ಡು ಅವರ ಸಚಿವ ಸಂಪುಟದಲ್ಲಿ ಕೃಷಿ, ಸಹಕಾರ, ಮಾರುಕಟ್ಟೆ, ಪಶುಸಂಗೋಪನೆ ಮತ್ತು ಡೈರಿ ಅಭಿವೃದ್ಧಿ ಮತ್ತು ಮೀನುಗಾರಿಕೆ ಇಲಾಖೆಯ ಸಚಿವರಾಗಿದ್ದಾರೆ. ಶ್ರೀನಿವಾಸ್ ಯಾದವ್ ಅವರು ಅಧ್ಯಕ್ಷರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಚಂದ್ರಬಾಬು ಅವರಿಗೆ ಉಂಡವಳ್ಳಿ ನಿವಾಸದಲ್ಲಿ ಕೃತಜ್ಞತೆ ಸಲ್ಲಿಸಿದ್ದಾರೆ.