ನ್ಯೂಸ್

ಆಂಧ್ರದಲ್ಲಿ 13 ಹೊಸ ಜಿಲ್ಲೆಗಳ ಉಗಮ: ಅಧಿಕೃತವಾಗಿ ಚಾಲನೆ ನೀಡಿದ ಸಿಎಂ ಜಗನ್ ಮೋಹನ್ ರೆಡ್ಡಿ

ಆಂಧ್ರಪ್ರದೇಶ: ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ, ಇಂದು ವರ್ಚುವಲ್​ ಮೂಲಕ ಅಧಿಕೃತವಾಗಿ ರಾಜ್ಯದ 13 ಹೊಸ ಜಿಲ್ಲೆಗಳಿಗೆ ಚಾಲನೆ ನೀಡಿದರು. ಇದರೊಂದಿಗೆ ಆಂಧ್ರಪ್ರದೇಶ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 26ಕ್ಕೆ ಏರಿದೆ.

ಹೊಸ ಜಿಲ್ಲೆಗಳ ರಚನೆ ಮತ್ತು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಪುನರ್ ರಚಿಸಿ ರಾಜ್ಯ ಸರ್ಕಾರ ಶನಿವಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಸರ್ಕಾರವು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು, ವಿಭಾಗೀಯ ಕಂದಾಯ ಅಧಿಕಾರಿಗಳು ಮತ್ತು ಇತರೆ ಅಧಿಕಾರಿಗಳನ್ನು ನೇಮಿಸಲಾಗಿದೆ.

ಜನಸಂಖ್ಯೆಯಲ್ಲಿ ನೆಲ್ಲೂರು ಜಿಲ್ಲೆ ಮೊದಲ ಸ್ಥಾನದಲ್ಲಿದೆ. ವಿಸ್ತೀರ್ಣದಲ್ಲಿ ಪ್ರಕಾಶಂ ಜಿಲ್ಲೆ ರಾಜ್ಯದಲ್ಲಿಯೇ ಅತಿ ದೊಡ್ಡ ಜಿಲ್ಲೆಯಾಗಿದೆ.

ಹೊಸದಾಗಿ ರಚನೆಯಾದ ಜಿಲ್ಲೆಗಳು ಮತ್ತು ಅವುಗಳ ಕೇಂದ್ರ ಕಚೇರಿ:
  1. ಶ್ರೀ ಬಾಲಾಜಿ ಜಿಲ್ಲೆ - ತಿರುಪತಿ
  2. ಅನ್ನಮಯ್ಯ ಜಿಲ್ಲೆ - ರಾಯಚೋಟಿ
  3. ಶ್ರೀ ಸತ್ಯಸಾಯಿ ಜಿಲ್ಲೆ - ಪುಟ್ಟಪರ್ತಿ
  4. ನಂದ್ಯಾಲ ಜಿಲ್ಲೆ - ನಂದ್ಯಾಲ
  5. ಬಾಪಟ್ಲ ಜಿಲ್ಲೆ - ಬಾಪಟ್ಲ
  6. ಪಲ್ನಾಡು ಜಿಲ್ಲೆ- ನರಸರಾವ್ ಪೇಟ
  7. ಏಲೂರು ಜಿಲ್ಲೆ- ಏಲೂರು
  8. ಎನ್​ಟಿಆರ್ ಜಿಲ್ಲೆ - ವಿಜಯವಾಡ
  9. ಅನಕಾಪಲ್ಲಿ ಜಿಲ್ಲೆ- ಅನಕಾಪಲ್ಲಿ
  10. ಕಾಕಿನಾಡ ಜಿಲ್ಲೆ- ಕಾಕಿನಾಡ
  11. ಕೋನ ಸೀಮಾ ಜಿಲ್ಲೆ- ಅಮಲಾಪುರಂ
  12. ಮಾನ್ಯಂ ಜಿಲ್ಲೆ - ಪಾರ್ವತಿಪುರಂ
  13. ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ- ಪದೇರು