ನ್ಯೂಸ್

‘ಅಂಧಯುಗ’ ನಾಟಕ ಪ್ರದರ್ಶನ

ಅವಿನಾಶ್ ಜೈನಹಳ್ಳಿ

ರಾಮಕೃಷ್ಣನಗರದ ನಟನ ರಂಗ ಮಂದಿರದಲ್ಲಿ ಸೆ.29 ರಂದು ಸಂಜೆ 6.30ಕ್ಕೆ ನಟನ ಪಯಣ ರೆಪರ್ಟರಿ ತಂಡದ ಕಲಾವಿದರಿಂದ ‘ಅಂಧಯುಗ’ ನಾಟಕ ಪ್ರದರ್ಶನ ನಡೆಯಲಿದೆ.

ರಂಗಕರ್ಮಿ ಮಂಡ್ಯ ರಮೇಶ್ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಮತ್ತು ತಿಪ್ಪೇಸ್ವಾಮಿ ಅವರು ಈ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ನಾಟಕದ ವಸ್ತ್ರಾಲಂಕಾರ ರಂಜನಾ ಕೇರಾ, ಸಂಗೀತ ಸಂಯೋಜನೆ ನಟನದ ರಂಗ ಕಲಾವಿದೆ, ಉಪನ್ಯಾಸಕಿ ದಿಶಾ ರಮೇಶ್, ನಾಟಕದ ದೃಶ್ಯ ಸಂಯೋಜನೆ ಮತ್ತು ವಿನ್ಯಾಸ ನಟನದ ಪ್ರಾಂಶುಪಾಲ ಮೇಘ ಸಮೀರ ಅವರದ್ದು.