ನ್ಯೂಸ್

ಪ್ರಾಚೀನ ಭಾರತೀಯರು ನಮ್ಮ ಸಂಸ್ಕೃತಿಯನ್ನು ಪ್ರಚಾರ ಮಾಡಿದರು, ಯಾರನ್ನು ಮತಾಂತರ ಮಾಡಲಿಲ್ಲ: RSS chief Mohan Bhagwat

ನವದೆಹಲಿ: ಪ್ರಾಚೀನ ಕಾಲದಲ್ಲಿ ಭಾರತೀಯರು ಸದ್ಭಾವನೆಯೊಂದಿಗೆ ಜಗತ್ತಿನದಾದ್ಯಂತ ಪ್ರಯಾಣಿಸುತ್ತಿದ್ದರು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್(RSS chief Mohan Bhagwat) ಭಾನುವಾರ (ಅಕ್ಟೋಬರ್​,19) ತಿಳಿಸಿದ್ದಾರೆ.

ಈ ಬಗ್ಗೆ ಆರ್ಯ ಯುಗ ವಿಷಯ ಕೋಶ್ ವಿಶ್ವಕೋಶ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಭಾಗವತ್​, ಭಾರತೀಯರು ಮತಾಂತರವನ್ನು ಬಯಸುವ ಬದಲು ತಮ್ಮ ಸಂಸ್ಕೃತಿ ಮತ್ತು ಜ್ಞಾನವನ್ನು ಹಂಚಿಕೊಂಡರು ಎಂದು ಹೇಳಿದ್ದಾರೆ. ಅಲ್ಲದೆ, ನಮ್ಮ ಪೂರ್ವಜರು ಮೆಕ್ಸಿಕೋದಿಂದ ಸೈಬೀರಿಯಾಕ್ಕೆ ಪ್ರಯಾಣ ಬೆಳೆಸಿ ವಿಜ್ಞಾನವನ್ನು ಕಲಿಸಿದರು. ಇವರು ಯಾರನ್ನೂ ಸಹ ಮತಾಂತರ ಮಾಡಲಿಲ್ಲ. ನಾವು ಸದ್ಭಾವನೆ ಮತ್ತು ಏಕತೆಯ ಸಂದೇಶದೊಂದಿಗೆ ಹೋದೆವು ಎಂದು ಭಾರತೀಯ ಇತಿಹಾಸವನ್ನು ನೆನಪಿಸಿಕೊಂಡಿದ್ದಾರೆ.

ಮುಂದುವರೆದು ಮಾತನಾಡಿದ ಭಾಗವತ್​, ಭಾರತವನ್ನು ಪದೇ ಪದೇ ಆಕ್ರಮಿಸಿ ಲೂಟಿ ಮಾಡಲಾಗಿದೆ. ಅದರೆ, ಕೊನೆಯ ಆಕ್ರಮಣಕಾರರು ಭಾರತೀಯರ ಮನಸ್ಸನ್ನು ಗುರಿಯಾಗಿಸಿಕೊಂಡು ತೀವ್ರವಾಗಿ ದಾಳಿ ನಡೆಸಿದರು ಎಂದಿದ್ದಾರೆ.

ನಮ್ಮ ಮೇಲೆ ಅನೇಕ ಆಕ್ರಮಣಕಾರರು ಬಂದು ನಮ್ಮನ್ನು ಲೂಟಿ ಮಾಡಿ ಗುಲಾಮರನ್ನಾಗಿ ಮಾಡಿದ್ದಾರೆ. ಭಾರತದ ಮೇಲೆ ಆಕ್ರಮಣ ಮಾಡಿದ ಕೊನೆಯವರು ನಮ್ಮ ಮನಸ್ಸನ್ನು ಲೂಟಿ ಮಾಡಿದರು. ಅಲ್ಲದೆ, ನಮ್ಮ ಸಾಮರ್ಥ್ಯಗಳನ್ನು ಮತ್ತು ಜಗತ್ತಿನೊಂದಿಗೆ ನಾವು ಏನು ಹಂಚಿಕೊಳ್ಳಬಹುದು ಎಂಬುದನ್ನು ನಾವು ಮರೆತಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತದಲ್ಲಿ ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಜ್ಞಾನದ ಮಹತ್ವದ ಬಗ್ಗೆ ಮಾತನಾಡಿದ RSS ಮುಖ್ಯಸ್ತ, ಆಧ್ಯಾತ್ಮಿಕ ಜ್ಞಾನ ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದೆ. ಆರ್ಯವ್ರತ ವಂಶಸ್ಥರಾದ ನಾವು ವಿಜ್ಞಾನವನ್ನು ಹೊಂದಿದ್ದೇವೆ. ನಮ್ಮಲ್ಲಿ ವಿಜ್ಞಾನ, ಆಯುಧಗಳು, ಬಲ, ಶಕ್ತಿ, ನಂಬಿಕೆ ಮತ್ತು ಜ್ಞಾನವಿದೆ ಎಂದಿದ್ದಾರೆ. (ಏಜೆನ್ಸೀಸ್)