ನ್ಯೂಸ್

ರೋಷನ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆ್ಯಂಕರ್ ಅನುಶ್ರೀ...Anushree Wedding

ಬೆಂಗಳೂರು: ಆ್ಯಂಕರ್ ಅನುಶ್ರೀ ( Anushree Wedding )  ಅವರು ರೋಷನ್ ಜೊತೆ ಇಂದು (ಆಗಸ್ಟ್ 28) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಮದುವೆ ಅದ್ದೂರಿಯಾಗಿ ನೆರವೇರಿದ್ದು, ಫೋಟೋಗಳು ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿವೆ.

ಇಂದು ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ಅದ್ದೂರಿಯಾಗಿ  ಬೆಂಗಳೂರಿನ ಹೊರ ವಲಯದಲ್ಲಿ ಇರುವ ಕಗ್ಗಲಿಪುರದ ರೆಸಾರ್ಟ್ ಒಂದರಲ್ಲಿ ನಡೆದಿದೆ.  ಅನುಶ್ರೀ ವಿವಾಹಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನವದಂಪತಿಗೆ ಶುಭಕೋರಿದ್ದಾರೆ.

ಮೂಲತಃ ಉದ್ಯಮಿ ಆಗಿರುವ ರೋಷನ್ ಕೂರ್ಗ್‌ನ ನಿವಾಸಿಯಾಗಿದ್ದಾರೆ. ರೋಷನ್ ತಂದೆ ಹೆಸರು ರಾಮಮೂರ್ತಿ ಹಾಗೂ ತಾಯಿ ಹೆಸರು ಸಿಸಿಲಿಯಾ ಎಂದು. ಇದು ಲವ್‌ ಕಂ ಅರೇಂಜ್ಡ್‌ ಮ್ಯಾರೇಜ್‌ ಅಂತ ಹೇಳಲಾಗುತ್ತಿದೆ. ಈ ಕುರಿತಾಗಿ ಯಾವುದೇ ಖಚಿತ ಮಾಹಿತಿಲ್ಲ ಇಲ್ಲ.

ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಅನುಶ್ರೀ, ʻಬಿಗ್‌ ಬಾಸ್‌ʼನಲ್ಲಿಯೂ ಸ್ಪರ್ಧಿಸಿದ್ದರು. ನಟಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿದ ಅನುಶ್ರೀ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಇದೀಗ ಖಾಸಗಿವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಇವರು ಮದುವೆ ಫೋಟೋಗಳು ವೈರಲ್​​ ಆಗುತ್ತಿದ್ದಂತೆ ಅಭಿಮಾನಿಗಳು ಈ ಜೋಡಿಗೆ ಶುಭಕೋರಿದ್ದಾರೆ.