ಜೆಸಿಐ ಶಿವಮೊಗ್ಗ ರಾಯಲ್ಸ್ ಅಧ್ಯಕ್ಷ ಜೆ.ಬಿ.ಸುದರ್ಶನ್ ಮಾತನಾಡಿದರು. 
ನ್ಯೂಸ್

ವಿಶ್ವ ದಾಖಲೆಗಾಗಿ ಅನವರತ-24 ತರಬೇತಿ

ನವೀನ ಬಿ.ಎಂ

ಶಿವಮೊಗ್ಗ: ಜೆಸಿಐ ಶಿವಮೊಗ್ಗ ರಾಯಲ್ಸ್‌ನಿಂದ ಶಿವಮೊಗ್ಗದ ಎಲ್ಲ ಜೆಸಿಐ ಸಂಸ್ಥೆಗಳ ಸಹಯೋಗದಲ್ಲಿ ವಿಶ್ವದಾಖಲೆಗಾಗಿ 24 ಗಂಟೆ ನಿರಂತರ ತರಬೇತಿ ಕಾರ್ಯಕ್ರಮ ಅನವರತ-24 ಹಮ್ಮಿಕೊಳ್ಳಲಾಗಿದ್ದು, ಮೇ 23ರ ಮಧ್ಯರಾತ್ರಿ 12ರಿಂದ ಮೇ 24ರ ಮಧ್ಯರಾತ್ರಿ 12ರವರೆಗೆ ಆಲ್ಕೊಳದ ನಂದಿನಿ ಬಡಾವಣೆಯ ತಾಯಿಮನೆ ಹಾಲ್‌ನಲ್ಲಿ ತರಬೇತಿ ನಡೆಯಲಿದೆ ಎಂದು ಜೆಸಿಐ ಶಿವಮೊಗ್ಗ ರಾಯಲ್ಸ್ ಅಧ್ಯಕ್ಷ ಜೆ.ಬಿ.ಸುದರ್ಶನ್ ಹೇಳಿದರು.

24 ತರಬೇತುದಾರರು 24 ವಿವಿಧ ವಿಷಯಗಳ ಕುರಿತು 24ಕ್ಕೂ ಹೆಚ್ಚು ಶಿಬಿರಾರ್ಥಿಗಳಿಗೆ ತರಬೇತಿ ನೀಡುವರು. ರಾಷ್ಟ್ರೀಯ ತರಬೇತಿ ದಿನದ ನಿಮಿತ್ತ ಅನೇಕ ಸಂಸ್ಥೆಗಳ ಸಹಕಾರದಿಂದ ತರಬೇತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಇದು ನೊಬೆಲ್ ವರ್ಲ್ಡ್ ರೆಕಾರ್ಡ್, ಲಿಮ್ಕಾ ಬುಕ್ ಆಫ್ ರೆಕಾರ್ಡ್ ಸೇರಲಿದೆ. ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತಿರುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತರಬೇತುದಾರ ಜೆಸಿ ಪ್ರಮೋದ್ ಶಾಸ್ತ್ರಿ ಮಾತನಾಡಿ, ಎಲ್ಲ 24 ವಿಷಯಗಳ ತರಬೇತಿಯನ್ನು ವಿವಿಧ ವರ್ಗದ ಶಿಬಿರಾರ್ಥಿಗಳಿಗೆ ಉಪಯೋಗವಾಗುವಂತೆ ಸಿದ್ಧಪಡಿಸಲಾಗಿದೆ. ಕ್ರೀಯಾತ್ಮಕ ಶೈಲಿಯಲ್ಲಿ ಜೆಸಿಐ ಭಾರತದಿಂದ ಪ್ರಮಾಣಿಕೃತಗೊಂಡ ರಾಷ್ಟ್ರೀಯ ಮತ್ತು ವಲಯ ತರಬೇತುದಾರರಿಂದ ತರಬೇತಿ ನಡೆಯಲಿದೆ ಎಂದರು.
ಪ್ರಮುಖರಾದ ಮೋಹನ್ ಕಲ್ಪತರು, ಸ್ಮಿತಾ ಮೋಹನ್, ದಿವ್ಯಾ ಪ್ರವೀಣ್, ಮಧು, ನವೀನ್ ತಲಾರಿ ಸುದ್ದಿಗೋಷ್ಠಿಯಲ್ಲಿದ್ದರು.