ನ್ಯೂಸ್

ಸ್ಟಾರ್ ಹೀರೋ ಮಗನೊಬ್ಬ ನನ್ನ ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದ! ಗುಟ್ಟು ರಟ್ಟು ಮಾಡಿದ Ananya Pandey

Webdesk - Savina Naik

ಮುಂಬೈ:  ಸದ್ಯ ಬಾಲಿವುಡ್​​ನಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ  ಹಿರಿಯ ನಟ ಚಂಕಿ ಪಾಂಡೆ ಅವರ ಪ್ರೀತಿಯ ಮಗಳು ಅನನ್ಯಾ ಪಾಂಡೆ ( Ananya Pandey ). ಇತ್ತೀಚೆಗಷ್ಟೇ ಸ್ಟಾರ್ ಹೀರೋ ಮಗನ ಬಗ್ಗೆ ಅನನ್ಯಾ ಶಾಕಿಂಗ್ ಕಮೆಂಟ್ಸ್ ಮಾಡಿದ್ದಾಳೆ.

ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ ಹೀರೋ ತನ್ನ ಮಗ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಅವರು ಬೇರಾರೂ ಅಲ್ಲ, ಬಿಟೌನ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್.

ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಮತ್ತು ಆರ್ಯನ್ ಖಾನ್ ಬಾಲ್ಯದ ಸ್ನೇಹಿತರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅನನ್ಯಾ, ಆರ್ಯನ್ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಶನದಲ್ಲಿ ಅನನ್ಯಾ ಮಾತನಾಡಿ, ''ನಾನು ಏನು ಮಾಡುತ್ತೇನೆ, ದಿನವಿಡೀ ಏನು ತಿನ್ನುತ್ತೇನೆ... ಎಲ್ಲವನ್ನೂ ವಿಡಿಯೋದಲ್ಲಿ ರೆಕಾರ್ಡ್ ಮಾಡುತ್ತೇನೆ. ಆದರೆ ಅವು ಪ್ರಕಟವಾಗುವುದಿಲ್ಲ. ಈಗಲೂ ಆ ವಿಡಿಯೋಗಳು ನನ್ನ ಬಳಿ ಇವೆ. ನಾನು, ಸುಹಾನಾ ಖಾನ್, ಶನಯಾ ಕಪೂರ್ ಯಾವಾಗಲೂ ಏನನ್ನಾದರೂ ರೆಕಾರ್ಡ್ ಮಾಡುತ್ತಿದ್ದೆವು..  ಆರ್ಯನ್ ಅವರು ಹೇಳಿದಂತೆ ಮಾಡದಿದ್ದರೆ ನಮ್ಮ ವೀಡಿಯೊಗಳನ್ನು ಸೋರಿಕೆ ಮಾಡುವುದಾಗಿ ಯಾವಾಗಲೂ ಬೆದರಿಕೆ ಹಾಕುತ್ತಿದ್ದರು. ಎಲ್ಲವೂ ಬಾಲ್ಯದ ಸವಿನೆನಪುಗಳು..” ಎಂದು ತಮಾಷೆಯಾಗಿ ಅನನ್ಯಾ ಹಂಚಿಕೊಂಡಿದ್ದಾರೆ.  ಈ ಕಾಮೆಂಟ್ಸ್​​ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ.

ಆರ್ಯನ್​ ಖಾನ್​, ಅನನ್ಯಾ ಪಾಂಡೆ

ಶಾರುಖ್ ಪುತ್ರ ಆರ್ಯನ್ ಖಾನ್ ಈಗಷ್ಟೇ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಬಟ್ಟೆ ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಆರ್ಯನ್, ಉದ್ಯಮ ವಲಯದಲ್ಲಿ ತಮ್ಮದೇ ಆದ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾರೆ.

ಅನನ್ಯಾ ಇದುವರೆಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಡಿಮೆ ಸಮಯದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ನಟಿಯ ಮುಂಬರುವ ಚಿತ್ರಕ್ಕಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.