ನ್ಯೂಸ್

VIDEO| ಖಾಸಗಿ ಜೆಟ್​ನಲ್ಲಿ ಉದ್ಯೋಗಿ ಹುಟ್ಟುಹಬ್ಬ ಆಚರಿಸಿದ ಅನಂತ್ ಅಂಬಾನಿ!

ಮುಂಬೈ: ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ನಿರ್ದೇಶಕರಾಗಿರುವ ಅನಂತ್ ಅಂಬಾನಿ ಅವರು ತಮ್ಮ ಉದ್ಯೋಗಿಯ ಹುಟ್ಟುಹಬ್ಬವನ್ನು ಖಾಸಗಿ ಜೆಟ್‌ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವೈರಲ್ ವಿಡಿಯೋದಲ್ಲಿ ಅನಂತ್ ಅಂಬಾನಿ ತಮ್ಮ ಸಂಸ್ಥೆಯ ಉದ್ಯೋಗಿಯ ಜನ್ಮದಿನವನ್ನು ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ನೀಲಿ ಬಣ್ಣದ ಟೀ ಶರ್ಟ್‌ ಹಾಗೂ ಕಪ್ಪು ಪ್ಯಾಂಟ್‌ ಧರಿಸಿರುವ ಅನಂತ್‌ ಅಂಬಾನಿ ಅವರು ಉದ್ಯೋಗಿ ತನ್ನ ಹುಟ್ಟುಹಬ್ಬದ ಕೇಕ್ ಕತ್ತರಿಸುವ ವೇಳೆ ಜತೆಯಾಗಿದ್ದು ಸಂಭ್ರಮಿಸಿದ್ದಾರೆ.

ನೌಕರರು ಚಪ್ಪಾಳೆ ತಟ್ಟುತ್ತಿದ್ದಂತೆಯೇ ಉದ್ಯೋಗಿಯನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಬಾಸ್​ ನೀಡಿದ ಸರ್​ಪ್ರೈಸ್​​ನಿಂದ ಖುಷಿಯಾದ ಉದ್ಯೋಗಿ ಭಾವುಕರಾಗಿ ಅನಂತ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ. ಅನಂತ್‌ ಅವರು ಕೇಕ್‌ ಅನ್ನು ಕತ್ತರಿಸಿ ಉದ್ಯೋಗಿಗೆ ತಿನ್ನಿಸಿದ್ದಾರೆ. ಬಿಲಿಯನೇರ್ ಮುಕೇಶ್ ಅಂಬಾನಿ ಮಗನ ಸೌಹಾರ್ದ ಗುಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.