ಚೆನ್ನೈ: ಭಾರತದ ಪ್ರಮುಖ ಮಹಾನಗರಗಲ್ಲಿ ಸ್ಥಳೀಯ ಸಂಚಾರಕ್ಕೆ ಅನುವಾಗುವ ಫ್ಲೈಯಿಂಗ್ ಎಲೆಕ್ಟ್ರಿಕಲ್ ಟ್ಯಾಕ್ಸಿಯನ್ನು ಅಭಿವೃದ್ಧಿಪಡಿಸುತ್ತಿರುವ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್‍ನ್ನು ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮುಂದಿನ ವರ್ಷದ ವೇಳೆಗೆ ಫ್ಲೈಯಿಂಗ್ ಎಲೆಕ್ಟ್ರಿಕ್ ಟ್ಯಾಕ್ಸಿಯನ್ನು ನಿರ್ಮಿಸಲು ಮದ್ರಾಸ್‍ನ ಐಐಟಿ ಮುಂದಾಗಿದೆ. ಈ ಬೆಳವಣಿಗೆಯಿಂದ ನಾವು ಇನ್ನು ಮುಂದೆ ಆವಿಷ್ಕಾರಕರ ಕೊರತೆಯಿರುವ ದೇಶವಾಗಿ ಉಳಿಯುವುದಿಲ್ಲ. ಮದ್ರಾಸ್ ಐಐಟಿ ವಿಶ್ವದ ಅತ್ಯಂತ ಸಕ್ರಿಯ ಸಂಸ್ಥೆಗಳಲ್ಲಿ ಒಂದಾಗಿದೆ. ಸಂಸ್ಥೆಯ ಸಾಧನೆಗೆ ಧನ್ಯವಾದಗಳು ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆನಂದ್ ಮಹೇಂದ್ರ ಅವರು ಮಾಡಿರುವ ಪೋಸ್ಟ್ 190K ಕ್ಕಿಂತ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಈ ಪೋಸ್ಟ್ ಹಲವರು ಪ್ರತಿಕ್ರಿಯೆ ನೀಡಿದ್ದು ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ 2023-24ರ ಹಣಕಾಸು ವರ್ಷದಲ್ಲಿ ತನ್ನ ಹಳೆಯ ವಿದ್ಯಾರ್ಥಿಗಳು, ಉದ್ಯಮಿಗಳು, ದಾನಿಗಳಿಂದ ಸುಮಾರು 513 ಕೋಟಿ ರೂ. ಹಣವನ್ನು ಸಂಗ್ರಹಿಸಿದೆ ಎಂದು ಹೇಳಿದೆ.