ಲೇಖನ: ಕವಿತಾ ಮುರಳಿಮನೋಹರ್
ಇದೇ ತಿಂಗಳ 24 ನೇ ತಾರೀಕು ಅಮೆರಿಕಾ ದೇಶದ ನ್ಯೂಯಾರ್ಕ್ ರಾಜ್ಯದ ರಾಜಧಾನಿ ಆಲ್ಬನಿಯಲ್ಲಿರುವ "ಕನ್ನಡ ಕೂಟ ಆಫ್ ಕ್ಯಾಪಿಟಲ್ ಡಿಸ್ಟ್ರಿಕ್ಟ್ " (ಕೆ ಕೆ ಸಿ ಡಿ) ಒಂದು ದಿನದ ಬಸ್ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಚಳಿಗಾಲದಲ್ಲಿ ಬಿಸಿ ಬಿಸಿ ವಡೆ, ಬಜ್ಜಿ ಖಾಲಿಯಾಗುತ್ತಲ್ಲ ಹಾಗೆ ಚಿಟಿಕೆ ಹೊಡೆಯೋದ್ರಲ್ಲಿ ಎಲ್ಲಾ 55 ಬಸ್ ಸೀಟುಗಳು ಮಾರಾಟವಾಗಿ ಹೋದ್ವು . ಆಧಾರ್ ಕಾರ್ಡ್ ಇದ್ರೂ ಪಾಪ ನಮ್ ಹೆಣ್ಣುಮಕ್ಕಳು ದುಡ್ಡು ಕೊಟ್ಟು ಬಸ್ ಟಿಕೆಟ್ ಕೊಂಡು ಕೊಳ್ಳಬೇಕಾಗಿತ್ತು.
ಆಗಸ್ಟ್ 24 ಶ್ರಾವಣ ಶನಿವಾರ ಬೆಳಗ್ಗೆ 6:45 AM ಗೆ ಆಲ್ಬನಿ ಹಿಂದೂ ಟೆಂಪಲ್ ಹತ್ತಿರದಿಂದ ನಮ್ಮ ಬಸ್ಸು ಒನ್ ಡೇ ಟ್ರಿಪ್ ಕಡೆಗೆ ಪ್ರಾರಂಭ ಆಯ್ತ. ನಮ್ಮ ಬ್ಯಾಕ್ ಸೀಟೆರ್ ಗಳು ವೆಂಕಟರಮಣ ಪಾದಗಳಿಗೆ ಗೋವಿಂದೋ ಗೋವಿಂದ, ಗಣಪತಿ ಬಪ್ಪ ಮೌರ್ಯ, ಕೆಕೆಸಿಡಿಗೆ ಜಯವಾಗಲಿ ಅಂತ ಕೂಗೋಕೆ ಪ್ರಾರಂಭ ಮಾಡಿದ್ರು. ನಾವು ದೇಸಿಗಳು ಎಲ್ಲೋದ್ರು ದೇಸಿಗಳೆ. ಇಲ್ಲಿಂದ 90 ನಿಮಿಷ ಡ್ರೈವ್ ತಿಂಡಿಗೆ ಸ್ಟಾಪ್ ಅಂತ ಮುಂಚೆನೇ ನಿರ್ಧಾರ ಆಗಿತ್ತು.ಈ 90 ನಿಮಿಷಗಳು ಕೇವಲ 9 ನಿಮಿಷ ತರ ಕಳೆದೋಯ್ತು. ಗಂಡಸ್ರು ಆಡಿಯೋ ಸೆಟ್ ಮಾಡೋದ್ರಲ್ಲಿ ಬಸ್ಸಲ್ಲಿರೋವೆಲ್ಲಾ ವ್ಯವಸ್ಥೆಗಳನ್ನು ನೋಡುವುದರಲ್ಲಿ ಬ್ಯುಸಿ ಆದ್ರು, ಹೆಣ್ಮಕ್ಕಳು ಸೆಲ್ಫಿ ತಗೋಳೋದ್ರಲ್ಲಿ, ಫೋಟೋ ಇಡುಸ್ಕೊಳೋದ್ರಲ್ಲಿ ಬಟ್ಟೆಗಳ್ನ ನೋಡೋದ್ರಲ್ಲಿ ಬ್ಯುಸಿ ಆದ್ರು, ಇನ್ನ ಚಿಕ್ಕ ಮಕ್ಳು ಆ ಸಿಟಿ ನಿಂದ ಈ ಸೀಟಿಗೆ, ಈ ಸೀಟಿನಿಂದ ಆ ಸೀಟಿಗೆ ಹಾರಾಡುದ್ರಲ್ಲಿ ಬ್ಯುಸಿಯಾಗಿದ್ರು. ಅಷ್ಟರಲ್ಲಿ ನಮ್ಮ ಮೊದಲನೇ ಸ್ಟಾಕ್ ತಿಂಡಿಗೆ ತಲುಪಿದ್ವಿ. ಇಲ್ಲಿ ನಾನು ಬಹಳ ಮುಖ್ಯವಾದ ವ್ಯಕ್ತಿಯ ಪರಿಚಯ ಮಾಡಿಸೋದೆ ಮರೆತುಹೋದೆ, ಯಾರು ಅಂತೀರಾ, ನಮ್ಮ ಬಸ್ ಡ್ರೈವರ್ ಬಿಳಿಯ ಜೋ. ಈ ಜೋ ನಮಗೇನು ಹೊಸಬರಲ್ಲ. ಹೋದ ವರ್ಷ ಬಸ್ ಟ್ರಿಪಲ್ಲಿ ಈ ಜೋ ನಮ್ ಡ್ರೈವರ್ ಆಗಿದ್ರು . ಅವನಿಗೆ ನಮ್ಮ ಸ್ಪೈಸಿ ಮಸಾಲೆಯ ಖಾರದ ಊಟ ತುಂಬಾ ಇಷ್ಟ.
ಈಗ ತಿಂಡಿಯ ಸಮಯ. ನಾವ್ ದೇಶಿಗಳು ಎಲ್ಲೋದ್ರು ದೇಶಗಳೇ ಅನ್ನೋದಕ್ಕೆ ನಿಮಗೆ ಇನ್ನೊಂದು ಉದಾಹರಣೆ ಕೊಡ್ತೀನಿ ಬನ್ನಿ. ನಾವ್ ತಿಂಡಿ ಏನ್ರೀ ನಿಮ್ ಮನೇಲಿ ಅಂದ್ರೆ ಏನ್ ಹೇಳ್ತೀವಿ? ಉಪ್ಪಿಟ್ಟು ಅಂತೀವಲ್ಲ, ಅದೇ ಇಲ್ಲಿನು ತಿಂಡಿ, ಉಪ್ಪಿಟ್ಟು, ಚಟ್ನಿ , ಉದ್ದಿನ ವಡೆ, ಜೊತೆಗೆ ಖಡಕ್ ಮಸಾಲ ಚಾಯ್. ಎಲ್ಲರೂ ತಿಂಡಿ ತಿಂದು ಬಸ್ ಹತ್ತಿದ್ವಿ. ನಮ್ ಡ್ರೈವರ್ ಜೋ ಕೂಡ ತಿಂಡಿ ತಿಂದರು. ಅವರಿಗೆ ತಿಂಡಿ ಮದುವೆ ಊಟ ತರ ಇತ್ತು ಅನ್ಸುತ್ತೆ. ಇವರನ್ನು ಏನಾದ್ರೂ ಅಂಬಾನಿ ಮದ್ವೆಗೆ ಕರ್ಕೊಂಡ್ ಹೋಗ್ಬಿಟ್ರೆ ಊಟ ತಿಂದು ಏನಂತಾರೆ……..ಗೋವಿಂದೋ…………….. ಗೋವಿಂದ.
ಅಲ್ಲಿಂದ 30 ನಿಮಿಷ ನಮ್ಮ ಮೊದಲನೇ ನಿರ್ಧಾರಿತ ಪ್ರವಾಸತಾಣ. ಈ 30 ನಿಮಿಷ ಪ್ರತಿಯೊಬ್ಬರು ಅನುಭವಿಸಬೇಕಾದಂತಹ ಪ್ರಕೃತಿಯ ಸೌಂದರ್ಯ. ಎಲ್ಲಿ ನೋಡಿದರೂ ಹಸಿರು, ಬೆಟ್ಟ ಗುಡ್ಡಗಳು ಹಸಿರಿನ ಉಡುಗೆ ತೊಡುಗೆಗಳನ್ನ ತೊಟ್ಟಿದ್ದಾವೆ ಏನೋ ಎನ್ನುವಷ್ಟು ಸುಂದರವಾಗಿ ಇದೆ. ಅಷ್ಟು ಸುಂದರವಾಗಿದೆ ಸದಾ ಗ್ಯಾಜೆಟ್ ಅನ್ನೇ ನೋಡೋಣ ಸುಖ ತಂಪು ತುಂಬಿ ಕೊಳ್ತಾ ಇದೆ . ಇದನ್ನ ಅನುಭವಿಸೋ ಅಷ್ಟರಲ್ಲಿ ನಮ್ಮ ಬಸ್ಸು ಆಸೆಪಲ್ ಚಾಸಮ್ (Ausable Chasm) ಡೆಸ್ಟಿನೇಷನ್ ಗೆ ಬಂದು ನಿಂತಿತ್ತು.
ಆಲ್ಬನಿಯಿಂದ ಉತ್ತರದ ದಿಕ್ಕಿಗೆ 150 ಮೈಲಿ ದೂರದಲ್ಲಿ ಇರುವಂತಹ ಅಪ್ರತಿಮ ಅದ್ಭುತವಾದ ಪ್ರವಾಸತಾಣ ಆಸೆಪಲ್ ಚಾಸಮ್ ( Ausable Chasm) . ಈ ಪ್ರವಾಸ ತಾಣದ ಪ್ರವೇಶಕ್ಕೆ ಟಿಕೆಟ್ ಅನ್ನ ಕೆಕೆಸಿಡಿ ಮುಂಚೆನೇ ತಗೊಂಡಿತ್ತು. ನಮ್ಮ ಆಯ್ಕೆಯ ಪ್ಯಾಕೇಜ್ ಮೇಲೆ ನಮಗೆ ಒಂದು ಕೈಗೆ ಬ್ಯಾಂಡ್ ಕಟ್ತಾರೆ. ಈ ಪ್ಯಾಂಟ್ ಕಟ್ಕೊಂಡು ನಾವು ಪ್ರವಾಸ ತಾಣದ ಒಳಗೆ ಹೋಗ್ತೀವಿ. ಅಲ್ಲಿ ಮ್ಯಾಪ್ಗಳು ಇರುತ್ತದೆ. ಆ ಮ್ಯಾಪ್ಗಳಲ್ಲಿ ಇರೋ ಮಾರ್ಗ ನಮ್ಮ ಕೈಯಲ್ಲಿರೋ ಬ್ಯಾಂಡಿನ ಕಲರ್ ಗೆ ಮ್ಯಾಚ್ ಮಾಡ್ಕೊಂಡು ಮುಂದೆ ಹೋದರೆ ನಿಮಗೆ ಸುಮಾರು ಅಟ್ರಾಕ್ಷನ್ ಪ್ಲೇಸಸ್ ಸಿಗತ್ತೆ. ನಾವು ನೋಡಿದ್ದು ರೈನ್ಬೋ ಫಾಲ್ಸ್, ಎಲಿಫೆನ್ಸ್ ಹೆಡ್, ಕಾಲಮ್ ರಾಕ್, ಹೀಗೆ ಹಲವಾರು. ಹೀಗೆ ನಾವು ನೋಡ್ತಾ ಮುಂದೆ ಹೋದರೆ ಸೃಷ್ಟಿಯೇ ನಿರ್ಮಿಸಿರುವಂತಹ ಕಲ್ಲಿನ ಕಾಲದಾರಿಯನ್ನ ನಾವು ಪ್ರವೇಶಿಸುತ್ತೇವೆ. ಈ ಕಾಲ್ದಾರಿ ನಮ್ಮನ್ನ ನೂರಾರು ಅಡಿ ಕೆಳಗಡೆ ಕರ್ಕೊಂಡು ಹೋಗುತ್ತೆ ಮಾರ್ಗದಲ್ಲಿ ನಮಗೆ ಸಿಗುವುದು ಸಾಕಷ್ಟು ಅಡ್ವೆಂಚುರಸ್ trails. ಈ ಮಾರ್ಗ ನಮಗೆ ಸಾಕಷ್ಟುಶಾಂತಿಯನ್ನ ಕೊಡುತ್ತೆ, ಅಲ್ಲಲ್ಲಿ ಕುತ್ತು ಧ್ಯಾನ ಮಾಡೋಣ ಅನ್ನೋ ಹಾಗೆ ಅನ್ಸುತ್ತೆ, ಕಣ್ಣು ತುಂಬಿಕೊಳ್ಳೋ ಅಷ್ಟು ದೃಶ್ಯಗಳು ಸಿಗುತ್ತೆ. ಇದು ಫೋಟೋ ಶೂಟ್ ಮಾಡ್ಲಿಕ್ಕೆ ಒಳ್ಳೆ ಜಾಗ. ನೋಡಿ ಇದು ನಿಮ್ ವೆಡ್ಡಿಂಗ್ ಫ್ರೀ ಫೋಟೋ ಶೂಟ್ ಗೆ ಜಾಗ ಇದ್ರೂ ಇರಬಹುದು……..!!!
ಈ ಕಲ್ಲಿನ ಮಾರ್ಗ ಹೋಗಿ ನಿಲ್ಲೋ ಜಾಗದಲ್ಲಿ ರಾಫ್ಟಿಂಗ್ ಮತ್ತೆ ಟ್ಯೂಂಗಿಗೆ ಅವಕಾಶ ಮಾಡಿದ್ದಾರೆ. ಇಲ್ಲಿ ಅರಿಯುವಂತಹ ನದಿಯ ಹೆಸರು ಆಸೆಪಲ್. ಆಸೆಪಲ್ ಫ್ರೆಂಚ್ ಹೆಸರು, ಅದರ ಅರ್ಥ ಸ್ಯಾಂಡಿ ರಿವರ್ ಅಂತ. ಈ ನದಿ ಅಡಿರಾಂಡೆಕ್ ಅನ್ನೋಕಾಡಿನ ಮಧ್ಯೆ ಹರಿದು ಹೋಗುತ್ತೆ. ಇಲ್ಲಿ ಒಂದು ದೊಡ್ಡ ಬೆಟ್ಟ ತುಂಡಾಗಿ ನದಿ ಸರಳವಾಗಿ ಹರಿದು ಹೋಗಲಿ ಅಂತ ನಿಂತಿದ್ದೀಯೇನೋ ಅನ್ನೋ ಹಾಗೆ ಕಾಣುತ್ತೆ. ಇಲ್ಲಿ ವಾಟರ್ ರಾಫ್ಟಿಂಗ್ ಮತ್ತೆ ಟ್ಯೂಬಿಂಗ್ ಅನುಭವ ಅಪ್ರತಿಮವಾದದ್ದು. ವಾಟರ್ ರಾಫ್ಟಿಂಗ್ ಮುಗಿಸಿಕೊಂಡು ಬರುವಷ್ಟರಲ್ಲಿ ಊಟದ ಸಮಯ ಆಗಿತ್ತು.ಎಲ್ಲರಿಗೂ ಹೊಟ್ಟೆ ಅಸ್ತಿತ್ವ ಆದರೆ ಬಟ್ಟೆ ತುಂಬಾ ಒದ್ದೆ ಹಾಕಿದ್ರಿಂದ ಬಟ್ಟೆ ಚೇಂಜ್ ಮಾಡಬೇಕಿತ್ತು. ನಮ್ ದೇಸಿ ಜುಗಾಡ್ ಗೊತ್ತಲ್ಲ, ಬಸ್ ಒಳಗೆ ಹೋಗಿ ಟವಲ್, ದುಪಟ್ಟ ಅಡ್ಡ ಇಟ್ಕೊಂಡು ಡ್ರೆಸ್ ಚೇಂಜ್ ಮಾಡಿದ್ದೆ!. ಅಲ್ಲಿಂದ ಊಟಕ್ಕೆ ಬಂದ್ರೆ ನಮ್ ದೇಸಿ ಕಣ್ಗಳಿಗೆ ಖುಷಿನೋ ಖುಷಿ. ಯಾಕೆ ಅಂದ್ರೆ, ಊಟಕ್ಕೆ ವಾಂಗಿಬಾತು ಮತ್ತು ಮೊಸರನ್ನ ಕಣ್ರೀ. ಮಕ್ಕಳಿಗೋಸ್ಕರ ಪಾಸ್ತಾ ಕೂಡ ಇತ್ತು. ಆಹಾ ಎಷ್ಟು ಚೆನ್ನಾಗಿತ್ತು ಗೊತ್ತಾ, ಎಲ್ಲರೂ ಹೊಟ್ಟೆ ತುಂಬಾ ತಿಂದ್ರಿ ಕೆಲವರು ಬೇಗ ಬೇಗ ತಿಂದು ಫೇಸ್ಬುಕ್ಗೆ ಟ್ವಿಟರ್ ಗೆ ಅಂತ ರಿಲೀಸ್ ಮಾಡಕ್ಕೆ ಹೋದರು. ಇಷ್ಟೊಳಗೆ ಗಂಟೆ 2 PM ಆಗಿತ್ತು.
ನಾವು ಇಲ್ಲಿಂದ ಹೊರಟಿದ್ದು ಬೆನ್ ಅಂಡ್ ಜೆರ್ರಿ ಐಸ್ ಕ್ರೀಮ್ ಫ್ಯಾಕ್ಟರಿ ಇಲ್ಲಿಂದ ಸುಮಾರು 75 ಮೈಲಿ ದೂರ ಪೂರ್ವದ ದಿಕ್ಕಿಗೆ ಈಗ ನಾವು ಹೋಗಬೇಕು. ಈ ಮಾರ್ಗದ ಮಧ್ಯೆ ಚಾಂಪ್ಲಿನ್ (Lake Champlain ) ಅನ್ನುವ ಸರೋವರವನ್ನು ದಾಟಬೇಕು. ಈ ಸರೋವರವನ್ನು ನಾವು ಬಸ್ಸಿನ ಸಮೇತ ದೊಡ್ಡ ದೋಣಿ ( ಫೆರ್ರಿ ) ಯಲ್ಲಿ ದಾಟುತ್ತೇವೆ. ನಮ್ಮ ಬಸ್ ಸರೋವರದ ದಡಕ್ಕೆ ಬಂತು. ನಮ್ಮ ಫೋಟೋಗ್ರಾಫರ್ ಆದಂತಹ ಮುರುಳಿ ಮತ್ತು ಮನು ಕೆಳಗಿಳಿದು ನಮ್ ಬಸ್ಸು ಫೇರಿ ಒಳಗಡೆ ಹೋಗದನ್ನು ವಿಡಿಯೋ ಶೂಟ್ ಮಾಡಕ್ಕೆ ಶುರು ಮಾಡಿದ್ರು. ಈಗ ಫೇರಿ ಒಳಗಡೆ ನಮ್ ಬಸ್ ಹೋಗತ್ತೆ ನಾವೆಲ್ಲ ಬಸ್ಸಿಂದ ಇಳಿದು ಫೇರಿ ಮೇಲೆ ನಿಂತು ಸರೂವರವನ್ನು ದಾಡ್ತೀವಿ. ಮೂರು ಮೈಲಿ ದೂರ ಸುಮಾರು 20 ನಿಮಿಷ ಅಮೋಘವಾದ ದೃಶ್ಯಗಳನ್ನ ನೋಡಕ್ಕೆ ಸಿಗುತ್ತೆ. ಅದ್ಭುತವಾದ ಅನುಭವ ಈ ಫೆರ್ರಿ ಮೇಲೆ ನಿಂತು, ಕೆಳಗಡೆ ನೀರು, ಮೇಲ್ಗಡೆ ವಜ್ರದಂತೆ ಹೊಳೆಯುತ್ತಿರುವ ರವಿಯನ್ನ ನೋಡಕ್ಕೆ ಅವಕಾಶನೂ ಅದೃಷ್ಟನು ಬೇಕು. ನಮ್ಮ ಕಮ್ಯುನಿಟಿಯ ರವಿಯಂತು ಈ ರವಿಯನ್ನು ನೋಡ್ತಾ ಬೇರೆ ಒಂದು ಲೋಕಕ್ಕೆ ತೇಲಿ ಹೋಗಿಬಿಟ್ಟರೆನೋ ಅನ್ಸುತ್ತೆ. ಎಲ್ಲಾರು ಮೊಬೈಲ್ ಗಳಿಂದ ಫೋಟೋ, ವಿಡಿಯೋಗಳು ತೆಗೆಯೋಕೆ ಶುರು ಮಾಡಿದ್ರು. ಎಲ್ಲ ಜಾಲತಾಣಗಳಲ್ಲಿ ಈ ರೀಲ್ಸ್ಗೆ ಫೇಮಸ್ ಈಗ.
ಬಸ್ಸು ಫೆರ್ರಿ ಯಿಂದ ಹೊರಬಂದು ಐಸ್ ಕ್ರೀಮ್ ಫ್ಯಾಕ್ಟರಿ ಕಡೆಗೆ ಪಯಣ ಮುಂದುವರಿಸ್ತು. ನಮ್ಮ ಕಮ್ಯುನಿಟಿಯ ಫೇಮಸ್ ಕೊರಿಯೋಗ್ರಾಫರ್ ಸುಚಿತಾ ಜಾಜು ಒಂದು ಪ್ರಸಿದ್ಧ ಹಿಂದಿ ಹಾಡಿಗೆ ಕೊರಿಯೋಗ್ರಫಿ ಮಾಡಿದ್ರು. ಎಲ್ಲಾ 55 ಜನರು ಇದರಲ್ಲಿ ಪಾಲ್ಗೊಂಡ್ವಿ. ಒಂದು ಅದ್ಭುತವಾದ ವಿಡಿಯೋ ತಯಾರಾಯ್ತು. ಈ ವಿಡಿಯೋ ಕೂಡ ಫೇಸ್ಬುಕ್ ಅಲ್ಲಿ ಬಹಳ ಫೇಮಸ್ ಆಗಿದೆ.
ನಾವು ಐಸ್ ಕ್ರೀಮ್ ಫ್ಯಾಕ್ಟರಿಗೆ ಬರೋಷ್ಟರೊಳಗೆ ಸಮಯ 4:30pm. ನಾವು ಇಲ್ಲಿ ನಾವು ಇಲ್ಲಿ ೪ ಗಂಟೆಗೆ ಫ್ಯಾಕ್ಟರಿ ಒಳಗಡೆ ಹೋಗಿ ಐಸ್ ಕ್ರೀಮ್ ಹೇಗ್ ಮಾಡ್ತಾರೆ ಅಂತ ನೋಡೋದಕ್ಕೆ ಫ್ಯಾಕ್ಟರಿ ಟೂರ್ ಟಿಕೆಟ್ ತಗೊಂಡಿದ್ವಿ ಆದರೆ ಲೇಟಾಗಿದ್ರಿಂದ ಫ್ಯಾಕ್ಟರಿ ಒಳಗಡೆ ಹೋಗುವುದಕ್ಕೆ ಆಗಲಿಲ್ಲ. ಐಸ್ ಕ್ರೀಮ್ ಫ್ಯಾಕ್ಟರಿಗೆ ಬಂದು ಐಸ್ ಕ್ರೀಮ್ ತಿಂದಿಲ್ಲ ಅಂದ್ರೆ ಹೇಗೆ, ತಿರುಪತಿಗೆ ಹೋಗಿ ತಿಮ್ಮಪ್ಪನನ್ನ ನೋಡಲಿಲ್ಲ ಅನ್ನೋ ಹಾಗೆ ಆಗುತ್ತೆ. ಸ್ಟ್ರಾಬೆರಿ, ಕ್ಯಾರಮಲ್, ಚಾಕ್ಲೆಟ್, ಸಂಡೆ , ಹೀಗೆ ಬೇರೆ ಬೇರೆ ಫ್ಲೇವರ್ ಐಸ್ ಕ್ರೀಮನ್ನ ಎರಡು ಮೂರು ತಿಂದ್ವಿ. ಆದ್ರೆ ನಮ್ ದೇಸಿ ಗಳಿಗೆ ಫೇವರೆಟ್ ಗೊತ್ತಲ್ಲ, ಮ್ಯಾಂಗೋ ಫ್ಲೇವರ್ ತುಂಬಾ ಚೆನ್ನಾಗಿತ್ತು. ಐಸ್ ಕ್ರೀಮ್ ಗ್ರೇವಿಯಾರ್ಡ್ ಅಂತ ಎಲ್ಲಾದ್ರೂ ಕೇಳಿದಿರಾ. ಇಲ್ಲಿ ಒಂದು ಗ್ರೇವಿ ಯಾಡ್ ಇದೆ. ಇದು ಯಾವ ಯಾವ ಐಸ್ ಕ್ರೀಮ್ ಮಾರ್ಕೆಟ್ ಗೆ ಬಂತು, ಎಷ್ಟು ದಿನ ಇತ್ತು, ಅದರ ಚಿಕ್ಕ ವಿವರ ಮತ್ತೆ ಯಾವಾಗ ಮಾರ್ಕೆಟ್ ಅಲ್ಲಿ ಸ್ಟಾಪ್ ಆಯ್ತು ಅಂತ ವಿವರಣೆ ಇದೆ. ಈ ಐಸ್ ಕ್ರೀಮ್ ಗಳು ಈಗ ಮಾರ್ಕೆಟ್ ಅಲ್ಲಿ ಇಲ್ಲ. ಆದರಿಂದ ಇದನ್ನ ಗ್ರೇವಿ ಹಾಡಲ್ಲಿ ನೀವು ನೋಡ್ತೀರಾ.
ಸುಮಾರು ಐದೂವರೆಗೆ ಇಲ್ಲಿಂದ ಹೊರಟ್ವಿ. ನಮ್ಮ ಮುಂದಿನ ಡೆಸ್ಟಿನೇಷನ್ ಬರ್ಲಿಂಗ್ಟನ್, ವರ್ಮೌಂಟ್. ಸುಮಾರು 1/2 ಗಂಟೆ ಜರ್ನಿ. ಎಲ್ಲಾ ಮಕ್ಕಳು ಬಸ್ ಒಳಗೆ ಬಂದ್ರಾ. ಐಸ್ ಕ್ರೀಮ್ ಗಳು ಹೇಗಿತ್ತು, ಇನ್ನ ಬೇರೆ ಐಸ್ ಕ್ರೀಮ್ ಏನಾದ್ರು ಟ್ರೈ ಮಾಡಬೇಕಿತ್ತಾ? ಅನ್ನುವಷ್ಟರಲ್ಲಿ ನಾವು ಬರ್ಲಿಂಗ್ಟನ್ ತಲುಪಿದ್ವಿ. ಇಲ್ಲಿ ಚರ್ಚ್ ಸ್ಟ್ರೀಟ್, ಮಾರ್ಕೆಟ್ ಪ್ಲೇಸ್ ಅಂತ ಚಾಂಪ್ಲಿನ್ ನದಿ ದಡದಲ್ಲಿ ಓಡಾಡ್ತಾ ಸಾಯಂಕಾಲ ತಿಂಡಿಗೆ ಸಮಯ ಆಗಿತ್ತು. ಸೂರ್ಯೋದಯ ಮತ್ತು ಸೂರ್ಯಾಸ್ತ ನೋಡ್ಲಿಕ್ಕೆ ಸರೋವರದ ತೀರಕ್ಕಿಂತ ಬೇರೊಂದು ಸಾಟಿ ಇಲ್ಲ. ನಮಗೆ ಸೂರ್ಯಸ್ತವನ ನೋಡ್ಲಿಕ್ಕೆ ಅದೊಂದು ಉತ್ತಮವಾದ ಸಮಯ. ಅದೊಂದು ಅದ್ಭುತ ಮತ್ತು ಅವಿಸ್ಮರಣೀಯವಾದ ದೃಶ್ಯ. ಸ್ವಲ್ಪತ್ತು ಹಾಗೆ ಕೂತು ಅಂತ್ಯಾಕ್ಷರಿ ಹಾಡುತ್ತಾ ಸಾಯಂಕಾಲ ಸ್ನಾಕ್ಸ್ ತಿಂದ್ವಿ ಸ್ನಾಕ್ಸ್ ಗೆ ವೆಜಿಟೇಬಲ್ ಪಫ್ ಮತ್ತು ಮತ್ತು ಬಾದುಷ. ನಮ್ಮ ಬೆಂಕಿ ಬಸಣ್ಣ ಅವರ ಆಪ್ತಮಿತ್ರನಾದ ಮಂಗ ಅವರದೇ ಎಲ್ಲಾ ಅಡುಗೆ. ನಾವೆಲ್ಲ ಸೇರಿ ಒಂದು ವಿಡಿಯೋ ಮಾಡಿ ಅವರಿಗೆ . ತುಂಬುಹೃದಯದ ಧನ್ಯವಾದಗಳನ್ನು ಹೇಳುದ್ವಿ,
ಇಲ್ಲಿಗೆ ನಮ್ಮ ಎಲ್ಲಾ ಕಾರ್ಯಕ್ರಮಗಳು ಮುಗ್ದಿದ್ವು. ಮನೆಗೆ ವಾಪಸ್ ಹೋಗ ಟೈಮ್. ಸುಮಾರು 9:30pm ಟೈಮ್ ಗೆ ಎಲ್ಲಾರು ಬಸ್ ಬಂದು ಹತ್ತಿದ್ವಿ. ಇಲ್ಲಿಂದ ಜೋ ನಮ್ಮನ್ನ ಕರ್ಕೊಂಡು ಬಂದು ಇಳಿಸಿದ್ದ ಆಲ್ಬನಿ ಹಿಂದೂ ಟೆಂಪಲ್ ಹತ್ತಿರ. ಆಗ ಸಮಯ ಸುಮಾರು 12:30am. ನಮ್ಮ ಕೆಕೆಸಿಡಿಯ ಅಧ್ಯಕ್ಷರಾದಂತಹ ಸುನಿತಾ ದಂಪತಿಗಳಿಗೆ ತುಂಬು ಹೃದಯದ ಧನ್ಯವಾದಗಳು ಎಲ್ಲರೂ ಹೇಳಿ, ಕೆಕೆಸಿಡಿಯ ಎಲ್ಲಾ ಕಮಿಟಿ ಮೆಂಬರ್ಸ್ ಗೆ ಜೈ ಹೇಳ್ತಾ, ಎಲ್ಲರೂ ನಮ್ಮ ನಮ್ಮ ಮನೆಯ ಕಡೆಗೆ ಹೊರಟ್ವಿ.
ಒಂದು ಮಗುವನ್ನ ಬೆಳೆಸಲು ಊರೇ ಬೇಕು ಅನ್ನುವ ಗಾದೆ ಮಾತಿದೆ. ಅದಕ್ಕೆ ದೊಡ್ಡ ಉದಾಹರಣೆ ನಮ್ಮ ಕೆಕೆಸಿಡಿ. ಇಲ್ಲಿ ನಾವು ಎಲ್ಲಾ ವಯಸ್ಸಿನವರು ಅನ್ಯೋನ್ಯವಾಗಿ ಇರುವುದನ್ನು ನೀವು ನೋಡಬಹುದು. ಪ್ರತಿಯೊಂದು ಕುಟುಂಬಕ್ಕೂ ಇನ್ನೊಂದು ಕುಟುಂಬ ಆಸರೆಯಾಗಿ ಬದುಕುವ ಉದಾಹರಣೆ ನಮ್ಮ ಆಲ್ಪನೆಯ ಕನ್ನಡಿಗರಲ್ಲಿ ಕಾಣಬಹುದು. ಅದಕ್ಕೆ ನಾವು ಕೆಕೆಸಿಡಿಯನ್ನ ಒಂದು ಹಳ್ಳಿ ಎಂದು ಪರಿಗಣಿಸುತ್ತೇವೆ. ಎಲ್ಲರಿಂದ ಎಲ್ಲರಿಗಾಗಿ ಇರುವಂತಹ ಸಂಸ್ಥೆ ಕೆಕೆಸಿಡಿ. ಕನ್ನಡಿಗರಿಂದ ಕನ್ನಡ ಕ್ಕಾಗಿ ಇರುವವರು ನಾವು ಹೆಮ್ಮೆಯ ಆಲ್ಬನಿ ಕನ್ನಡಿಗರು. ಎಲ್ಲೇ ಇರು, ಹೇಗೇ ಇರು, ಎಂದೆಂದಿಗೂ ನೀ ಕನ್ನಡಿಗನಾಗಿರು.