ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಜಯವಾಣಿದಿನಪತ್ರಿಕೆ ಮತ್ತು ಸಿರಿ ಧರ್ಮಸ್ಥಳ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಬೋಳೂರು ಬೊಕ್ಕಪಟ್ನದ ಸರ್ಕಾರಿ ಶಾಲೆ ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. 
ನ್ಯೂಸ್

ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆ

ಮಂಗಳೂರಿನ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ’ವಿಜಯವಾಣಿ’ ದಿನಪತ್ರಿಕೆ ಮತ್ತು ’ಸಿರಿ’ ಧರ್ಮಸ್ಥಳ ಸಂಸ್ಥೆಯ ಜಂಟಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಕ್ಕಳಿಗೆ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯು ಶುಕ್ರವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವು ಶಾಲೆಗಳಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಮಂಗಳೂರಿನ ಸಂತ ಅಲೋಶಿಯಸ್ ಶಾಲೆ, ಎನ್‌ಐಟಿಕೆ ಶಾಲೆ, ಎನ್‌ಎಂಪಿಟಿ ಶಾಲೆ ಹಾಗೂ ಬೋಳೂರು ಬೊಕ್ಕಪಟ್ನದ ಸರ್ಕಾರಿ ಶಾಲೆ ಸೇರಿದಂತೆ ಹತ್ತಾರು ವಿದ್ಯಾಸಂಸ್ಥೆಗಳಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು. ಪ್ರಕೃತಿಯಿಂದ ಸ್ಫೂರ್ತಿ ಪಡೆಯೋಣ; ಹವಾಮಾನ ಸಂರಕ್ಷಣೆಗಾಗಿ ಎಂಬ ಧೀಮ್ ಅಡಿಯಲ್ಲಿ ಮಕ್ಕಳು ಪರಿಸರ ಜಾಗೃತಿ ಮೂಡಿಸುವ ಆಕರ್ಷಕ ಚಿತ್ರಗಳನ್ನು ಬಿಡಿಸಿದರು. 3 ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನ ನೀಡಲಾಗುತ್ತಿದ್ದು, ಸೃಜನಶೀಲ ಕಲಾಕೃತಿಗಳು ಗಮನ ಸೆಳೆದವು.
ವಿದ್ಯಾರ್ಥಿಗಳು ತಾವೇ ತಂದಿದ್ದ ಡ್ರಾಯಿಂಗ್ ಶೀಟ್, ಪೆನ್ಸಿಲ್, ಸ್ಕೆಚ್ ಪೆನ್ ಹಾಗೂ ವಾಟರ್ ಕಲರ್ ಮತ್ತು ಅಕ್ರಿಲಿಕ್ ಬಣ್ಣಗಳನ್ನು ಬಳಸಿ ಪರಿಸರ ಸಂರಕ್ಷಣೆ, ಗಿಡಮರಗಳ ಮಹತ್ವ ಮತ್ತು ಹಸಿರು ಭವಿಷ್ಯದ ಕುರಿತು ಆಕರ್ಷಕ ಚಿತ್ರಗಳನ್ನು ಬಿಡಿಸಿದರು. ಇಂಟರ್ನೆಟ್ ಪ್ರೇರಿತ ಚಿತ್ರಗಳಿಗೆ ಅವಕಾಶವಿಲ್ಲದ ಕಾರಣ, ಮಕ್ಕಳ ಸ್ವಂತಿಕೆ ಮತ್ತು ಸೃಜನಶೀಲತೆ ಈ ಸ್ಪರ್ಧೆಯಲ್ಲಿ ಎದ್ದು ಕಾಣುತ್ತಿತ್ತು.