ಬೆಂಗಳೂರು: ಮನೆ ಸಮೀಪದ ಮೈದಾನದಲ್ಲಿ ಬೆಳಗಿನ ಜಾವ ವಾಕಿಂಗ್ ಮಾಡುತ್ತಿದ್ದ ನಿವೃತ್ತ ಶಿಕ್ಷಕಿ ಮೇಲೆ ಬೀದಿನಾಯಿಗಳ ಹಿಂಡು ದಾಳಿ ನಡೆಸಿದ್ದು, ತೀವ್ರ ಗಾಯಗೊಂಡು ಶಿಕ್ಷಕಿ ಸಾವನ್ನಪ್ಪಿದ್ದಾರೆ.
ಜಾಲಹಳ್ಳಿ ಏರ್ ಪೋಸ್೯ ಈಸ್ಟ್ 7ನೇ ವಸತಿ ಸಮುಚ್ಚಯ ನಿವಾಸಿ ರಾಜ್ದುಲಾರಿ ಸಿನ್ಹಾ (76) ಮೃತೆ. ಗಂಗಮ್ಮನಗುಡಿ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರ ಮೂಲದ ಎ.ಕೆ. ಸಿಂಗ್ ಎಂಬುವರು ಏರ್‌ೆರ್ಸ್‌ನಲ್ಲಿ ಸಾರ್ಜೆಂಟ್ ಆಗಿದ್ದು, ಇವರ ಅತ್ತೆ ರಾಜ್ದುಲಾರಿ ನಿವೃತ್ತಿ ಬಳಿಕ ಅಳಿಯನ ಮನೆಯಲ್ಲಿ ನೆಲೆಸಿದ್ದರು. ಪ್ರತಿದಿನ ವಸತಿ ಸಮುಚ್ಚಯ ಸಮೀಪದ ಮೈದಾನದಲ್ಲಿ ವಾಯುವಿಹಾರ ಮಾಡುತ್ತಿದ್ದರು. ಬುಧವಾರ ಬೆಳಗಿನ ಜಾವ 6.20ರಲ್ಲಿ ವಾಕಿಂಗ್ ಶುರು ಮಾಡಿದ್ದಾಗ 12-13 ನಾಯಿಗಳ ಹಿಂಡು ವೃದ್ಧೆ ಮೇಲೆ ಎರಗಿವೆ. ತಲೆ, ಕತ್ತು ಮತ್ತು ಕೈಯನ್ನು ಹಲವು ಬಾರಿ ಕಚ್ಚಿದ ಪರಿಣಾಮ ತೀವ್ರ ಗಾಯಗೊಂಡಿದ್ದರು. ಅಲ್ಲಿಯೇ ಇದ್ದ ಸಾರ್ಜೆಂಟ್ ಹೇಮಚಂದ್ರ ಎಂಬುವರು ತಕ್ಷಣ ಸಹಾಯಕ್ಕೆ ಬಂದು ನಾಯಿಗಳನ್ನು ಓಡಿಸಿ ಸಂತ್ರಸ್ತೆಯ ಅಳಿಯನಿಗೆ ೆನ್ ಮಾಡಿ ವಿಷಯ ಮುಟ್ಟಿಸಿದರು.
ಅಳಿಯ ಎ.ಕೆ. ಸಿಂಗ್ ಮತ್ತು ಹೇಮಚಂದ್ರ ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋದರು. ಹೆಚ್ಚುವರಿ ಚಿಕಿತ್ಸೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಅಸುನೀಗಿದ್ದರು. ನಾಯಿಗಳು ವೃದ್ಧೆ ಮೇಲೆ ದಾಳಿ ನಡೆಸಿದ ಕಾರಣಕ್ಕೆ ನಾನು ಸ್ಥಳದಲ್ಲೇ ಇದ್ದರೂ ಅಸಹಾಯಕನಾಗಿದ್ದೆ. ಜೋರಾಗಿ ಕೂಗಿಕೊಂಡು, ಸ್ಥಳೀಯರು ಬಂದ ಮೇಲೆ ನಾಯಿಗಳನ್ನು ಓಡಿಸಿದೆವು ಎಂದು ಹೇಮಚಂದ್ರ ನೋವು ಹಂಚಿಕೊಂಡಿದ್ದಾರೆ.