ನ್ಯೂಸ್

ವಿವಾಹೇತರ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಂದ ಪತ್ನಿ! | Wife kills Husband

Wife kills Husband: ಪ್ರಿಯಕರ ಜೊತೆ ಸೇರಿ ಮಹಿಳೆಯೊಬ್ಬಳು ತನ್ನ ಗಂಡನನ್ನೇ ಕೊಂದು ಹಾಕಿದ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ಇದೀಗ ಬೆಳಕಿಗೆ ಬಂದಿದೆ. ಆರೋಪಿಗಳಾದ ತಬ್ಸುಮ್ ಮತ್ತು ಗೆಳೆಯ ಮೊಹಮ್ಮದ್ ತೌಫಿಕ್ ನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಮೊಹಮ್ಮದ್ ಶಾದುಲ್ ಮತ್ತು ಅವರ ಪತ್ನಿ ತಬ್ಸುಮ್ ದಂಪತಿ ರಾಜೀವ್ ಗಾಂಧಿ ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಇವರಿಗೆ ಒಬ್ಬ ಮಗಳಿದ್ದಾಳೆ. ನಾಲ್ಕು ವರ್ಷಗಳ ಹಿಂದೆ, ಮೊಹಮ್ಮದ್ ತೌಫಿಕ್ ಎಂಬ ವ್ಯಕ್ತಿಯೊಂದಿಗಿನ ತಬ್ಸುಮ್‌ನ ಪರಿಚಯವು ವಿವಾಹೇತರ ಸಂಬಂಧಕ್ಕೆ ಕಾರಣವಾಯಿತು. ಈ ವಿಷಯ ಆಕೆಯ ಪತಿಗೆ ತಿಳಿದಾಗ, ಅವರು ಆಕೆಯನ್ನು ಖಂಡಿಸಿದರು. ಪತಿ ಶಾದುಲ್ ತನ್ನ ವಿಷಯಕ್ಕೆ ಅಡ್ಡಿಯಾಗುತ್ತಿದ್ದಾನೆಂದು ಭಾವಿಸಿ, ಪತ್ನಿ ತನ್ನ ಗೆಳೆಯ ಮೊಹಮ್ಮದ್ ತೌಫಿಕ್ ಜೊತೆ ಸೇರಿ ಶಾದುಲ್ ನನ್ನು ಕೊಲ್ಲಲು ಪ್ಲ್ಯಾನ್​ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗಸ್ಟ್ 15ರ ಬೆಳಿಗ್ಗೆ, ತಬ್ಸುಮ್ ಮತ್ತು ಆಕೆಯ ಗೆಳೆಯ ಮೊಹಮ್ಮದ್ ತೌಫಿಕ್ , ಶಾದುಲ್ ಮಲಗಿದ್ದಾಗ ಹೊಡೆದು ಕೊಂದಿದ್ದಾರೆ. ಸ್ಥಳೀಯರಿಂದ ಬಂದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಘಟನೆಯ ತನಿಖೆ ಆರಂಭಿಸಿದರು. ನಂತರ, ಆರೋಪಿ ತಬ್ಸುಮ್ ಮತ್ತು ಆಕೆಯ ಗೆಳೆಯ ಮೊಹಮ್ಮದ್ ತೌಫಿಕ್ ನನ್ನು ಬಂಧಿಸಿ ರಿಮಾಂಡ್​ಗೆ ಇಂದು(ಆ.19) ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)