ತರೀಕೆರೆ: 94ಸಿಯಡಿ ಹಕ್ಕುಪತ್ರ ವಿತರಿಸಲು ಅರಣ್ಯ ಇಲಾಖೆ ಅನುಮತಿ ಅಗತ್ಯವಾಗಿರುವುದರಿಂದ ಎಚ್.ರಂಗಾಪುರದ ಕೆಂಗಯ್ಯನ ಕ್ಯಾಂಪ್‌ಅನ್ನು ಸರ್ಕಾರದಿಂದ ರಚಿಸಲಾಗುತ್ತಿರುವ ಉಪ ಗ್ರಾಮದಲ್ಲಿ ಸೇರ್ಪಡೆಗೊಳಿಸಿ ಹಕ್ಕುಪತ್ರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಭರವಸೆ ನೀಡಿದರು.
ತಾಲೂಕಿನ ಎಂಸಿ ಹಳ್ಳಿ ಗ್ರಾಪಂ ವ್ಯಾಪ್ತಿಯ ಕೆಂಗಯ್ಯನ ಕ್ಯಾಂಪ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ನರೇಗಾ ಯೋಜನೆಯಡಿ 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ನೂತನ ಅಂಗನವಾಡಿ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿ, ಕ್ಷೇತ್ರದಲ್ಲಿ ರಸ್ತೆ, ಸಮುದಾಯ ಭವನಗಳು ಸೇರಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲಾಗುತ್ತಿದ್ದು, ಅವಧಿ ಮುಗಿಯುವುದರೊಳಗೆ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಹಾಂತೇಶ್ ಭಜಂತ್ರಿ, ಗ್ರಾಪಂ ಉಪಾಧ್ಯಕ್ಷೆ ಅಲುಮೇಲು, ಸಿಡಿಪಿಒ ಎನ್.ಚರಣ್‌ರಾಜ್, ಗ್ರಾಪಂ ಸದಸ್ಯರಾದ ಎಂ.ರಾಜಪ್ಪ, ಜ್ಯೋತಿ, ಶೋಭಾ, ರಾಜೇಶ್ವರಿ, ಪಿಡಿಒ ಸಿ.ರವಿನಾಯ್ಕ, ಅಂಗನವಾಡಿ ಕಾರ್ಯಕರ್ತೆ ಎಚ್.ಆರ್.ಸವಿತಾ ಮತ್ತಿತರರಿದ್ದರು.