ನ್ಯೂಸ್

ಅಮೃತಬಿಂದು: ಶ್ರೀ ಶೈವಾಗಮ: ಒಣಗಿದ ಬಿಳಿ ಭಸ್ಮದಿಂದ ದೇಹದ ಎಲ್ಲ ಅಂಗಗಳಿಗೆ ಉದ್ಧೂಲನ ಮಾಡಿಕೊಳ್ಳಬೇಕು

kumarvrl

ಸರ್ವಾಂಗೋದ್ಧೂಲನಂ ಕುರ್ಯಾಚ್ಛುಷ್ಕೇಣ ಸಿತಭಸ್ಮನಾ | ಸಜಲೇನ ಚ ತೇನಾಥ ಸರ್ವಾಂಗಮವಗುಂಠಯೇತ್ ||

ಒಣಗಿದ ಬಿಳಿ ಭಸ್ಮದಿಂದ ದೇಹದ ಎಲ್ಲ ಅಂಗಗಳಿಗೆ ಉದ್ಧೂಲನ ಮಾಡಿಕೊಳ್ಳಬೇಕು. ನಂತರ ಸಜಲ ಭಸ್ಮದಿಂದ

ಎಲ್ಲ ಅಂಗಗಳಿಗೆ ಅವಗುಂಠನ ಮಾಡಿಕೊಳ್ಳಬೇಕು. ಎಡಗೈಯಲ್ಲಿ ಭಸ್ಮವನ್ನು ಹಿಡಿದು ಸದ್ಯೋಜಾತಾದಿ

ವಿಭಿನ್ನ ಮಂತ್ರಗಳನ್ನು ಪಠಿಸುತ್ತ ಬಲಗೈಯಿಂದ ಭಸ್ಮದ ಕಣಗಳನ್ನು ದೇಹದ ವಿಭಿನ್ನ ಅಂಗಗಳಲ್ಲಿ ಉದುರಿಸಿಕೊಳ್ಳುವುದಕ್ಕೆ ಉದ್ಧೂಲನ ಎನ್ನುತ್ತಾರೆ. ಭಸ್ಮದಲ್ಲಿ ನೀರನ್ನು ಮಿಶ್ರಣ ಮಾಡಿಕೊಂಡು ದೇಹದ ಅಂಗಾಂಗಗಳಲ್ಲಿ ಧರಿಸಿಕೊಳ್ಳುವುದಕ್ಕೆ ಅವಗುಂಠನ ಎನ್ನುತ್ತಾರೆ. ಇದರಿಂದ ವಿಶೇಷವಾಗಿ ಚರ್ಮದ ರೋಗನಿರೋಧಕಶಕ್ತಿ ಹೆಚ್ಚುತ್ತದೆ.

| ಚಂದ್ರಜ್ಞಾನಾಗಮ (11.11) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು