ನ್ಯೂಸ್

ಅಮೃತ ಬಿಂದು- ಶ್ರೀ ಶೈವಾಗಮ: ಪಾದಸೇವನವೆಂದು ಕರೆಯಲ್ಪಡುವ ಐವತ್ತೆರಡನೆಯ ಶೀಲದ ಬಗ್ಗೆ ಅರಿಯಿರಿ..

chandru

ಭಾವ್ಯಮಾನಂ ಸದಾ ಶಂಭೋಃ ಪಾದಸಂವಾಹನಾದಿಕಂ | ಪಾದಸೇವನಮೇತದ್ ದ್ವಿಪಂಚಾಶತ್ಕಮುದಾಹೃತಮ್ ||

ಶಿವನ ಪಾದಗಳನ್ನು ಒತ್ತುವುದಾಗಿ ಸದಾ ಮನಸ್ಸಿನಲ್ಲಿ ಭಾವಿಸಿಕೊಳ್ಳುವುದು ಪಾದಸೇವನವೆಂದು ಕರೆಯಲ್ಪಡುವ ಐವತ್ತೆರಡನೆಯ ಶೀಲ. ಶಿವನು ನಿರಾಕಾರನೂ ಸರ್ವವ್ಯಾಪಕನೂ ಆಗಿರುವುದರಿಂದ ಪ್ರತ್ಯಕ್ಷವಾಗಿ ಅವನ ಪಾದಸೇವೆ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮನಸ್ಸಿನಲ್ಲಿ ಆ ತೆರದ ಭಾವನೆ ಮಾಡಿಕೊಳ್ಳುವ ಮೂಲಕವೇ ಈ ಸೇವೆ ಮಾಡಬೇಕಾಗುತ್ತದೆ. ಈ ಪಾದಸೇವೆಯು ನವವಿಧ ಭಕ್ತಿಗಳಲ್ಲಿ ಒಂದಾಗಿದ್ದು, ಮಹಾಲಕ್ಷಿ್ಮಯು ಸದಾ ವಿಷ್ಣುವಿನ ಪಾದಸೇವೆ ಮಾಡುವ ಮೂಲಕ ಈ ಸೇವೆಗೆ ಹೆಸರಾಗಿದ್ದಾಳೆ.

| ಚಂದ್ರಜ್ಞಾನಾಗಮ (9.110) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು