ನ್ಯೂಸ್

ಅಮೃತಬಿಂದು: ಧ್ಯಾನ ಶಿವ ಸಾಕ್ಷಾತ್ಕಾರದ ಪ್ರಮುಖ ಸಾಧನ

ಶ್ರೀ ಶೈವಾಗಮ

ಶಂಭೋರ್ಯತ್ ದಿವ್ಯರೂಪಾನುಸಂಧಾನಂ ಕ್ರಿಯತೇ ಹೃದಿ | ಧ್ಯಾನಾಖ್ಯಂ ಶೀಲಮೇಕೋನಷಷ್ಟಿಕಂ ಸಂಪ್ರಚೋದಿತಮ್ ||

ಶಿವನ ದಿವ್ಯವೂ ಮಂಗಲವೂ ಆದ ರೂಪವನ್ನು ಹೃದಯದಲ್ಲಿ ಅನುಸಂಧಾನ ಮಾಡುವುದು ಧ್ಯಾನವೆಂದು ಕರೆಯಲ್ಪಡುವ ಐವತ್ತೊಂಭತ್ತನೆಯ ಶೀಲ. ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ ಹೇಳುವ ಯೋಗದ ಎಂಟು ಅಂಗಗಳಲ್ಲಿ ಒಂದಾದ ಧ್ಯಾನವು ಶಿವಸಾಕ್ಷಾತ್ಕಾರದ ಪ್ರಮುಖ ಸಾಧನವೂ ಹೌದು. No meditation no peace. know

meditation know peace. Now meditation now peace ಎಂಬ ಆಂಗ್ಲೋಕ್ತಿಯಂತೆ ಧ್ಯಾನಕ್ಕೂ ಮನಃಶಾಂತಿಗೂ ಅವಿನಾಭಾವ ಸಂಬಂಧ. ಆದ್ದರಿಂದ ಶಾಶ್ವತ ಶಾಂತಿಯನ್ನು ಬಯಸುವ ವ್ಯಕ್ತಿಯು ಧ್ಯಾನದ ಸಾಧನೆಗೆ ಶರಣಾಗತನಾಗಬೇಕು.

| ಚಂದ್ರಜ್ಞಾನಾಗಮ (9. 117) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು