ನ್ಯೂಸ್

ಅಮೃತಬಿಂದು-ಶ್ರೀ ಶೈವಾಗಮ: ಪಂಚಾಚಾರಗಳಿಗೆ ಸಂಬಂಧಿಸಿದ ವಿಚಾರ

kumarvrl

ಇತ್ಯೇವಂ ಕಥಿತಂ ತುಭ್ಯಂ ಪಂಚಾಚಾರವಿನಿರ್ಣಯಃ | ನಿಗಮಾಗಮಸಾrರೋsಯಂ ಮುಕ್ತಿಪ್ರಾಪ್ತ್ಯೆಕಸಾಧನಮ್ || ನಾಶಿಷ್ಯಾಯೋಪದೇಷ್ಟವ್ಯೋ ನಾಭಕ್ತಾಯ ಕದಾಚನ | ನಾಪುತ್ರಾಯ ಚ ವಕ್ತವ್ಯೋ ನ ಶ್ರದ್ಧಾರಹಿತಾಯ ಚ ||

ಈವರೆಗೆ ತಿಳಿಸಲಾದ ಪಂಚಾಚಾರಗಳಿಗೆ ಸಂಬಂಧಿಸಿದ ವಿಚಾರಗಳು ನಿಗಮಾಗಮಗಳ ಸಾರವಾಗಿದ್ದು, ಮುಕ್ತಿ ಪ್ರಾಪ್ತಿಗೆ ಏಕೈಕ ಸಾಧನವಾಗಿವೆ. ಯಾರು ಶಿಷ್ಯರಲ್ಲವೋ, ಭಕ್ತರಲ್ಲವೋ, ಉಪದೇಶಿಸುವ ಗುರುವನ್ನು ತನ್ನ ತಂದೆಯಂತೆ ಗೌರವಿಸುವುದಿಲ್ಲವೋ, ಯಾರಲ್ಲಿ ಶ್ರದ್ಧೆಯಿಲ್ಲವೋ ಅವರಿಗೆ ಎಂದೂ ಈ ವಿಚಾರಗಳನ್ನು ಉಪದೇಶಿಸಬಾರದು. ಸ್ವಚ್ಛ ಮತ್ತು ಫಲವತ್ತಾದ ಉತ್ತಮ ಭೂಮಿಯಲ್ಲಿ ಬಿತ್ತಿದ ಬೀಜವೇ ಹುಲುಸಾಗಿ ಬೆಳೆದು ಉತ್ತಮ ಫಲ ಕೊಡುವಂತೆ ಯೋಗ್ಯತಾಸಂಪನ್ನ ವ್ಯಕ್ತಿಗೆ ಉಪದೇಶಿಸಿದ ಜ್ಞಾನ ಮಾತ್ರ ಸಫಲವಾಗುತ್ತದೆ.

| ಚಂದ್ರಜ್ಞಾನಾಗಮ (9.127-128) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು