ಭೃತ್ಯತ್ವಂ ವೀರಭೃತ್ಯತ್ವಂ ಭೃತ್ಯಾಚಾರೋ ದ್ವಿಧಾ ಮತಃ | ಗುರುಲಿಂಗಜಂಗಮಾನಾಂ ಕೈಂಕರ್ಯಾಚರಣಂ ಹಿ ಯತ್|| ಭೃತ್ಯತ್ವಮಿತಿ ನಿರ್ದಿಷ್ಟಂ ದೇವದೇವೇನ ಶಂಭುನಾ ||
ಪಂಚಾಚಾರಗಳಲ್ಲಿ ನಾಲ್ಕನೆಯದಾದ ಗಣಾಚಾರ ಮತ್ತು ಅದರ ಅವಾಂತರ ಶೀಲಗಳನ್ನು ತಿಳಿಸಿದ ನಂತರ ಇದೀಗ ಕೊನೆಯದಾದ ಭೃತ್ಯಾಚಾರದ ಪ್ರಭೇದಗಳನ್ನು ತಿಳಿಸಲಾಗುತ್ತದೆ. ಭೃತ್ಯಾಚಾರದಲ್ಲಿ ಭೃತ್ಯತ್ವ ಮತ್ತು ವೀರಭೃತ್ಯತ್ವ ಎಂಬುದಾಗಿ ಎರಡು ಪ್ರಕಾರ. ಗುರು, ಲಿಂಗ, ಜಂಗಮರ ಸೇವೆ ಮಾಡುವುದನ್ನು ಭೃತ್ಯತ್ವವೆಂದು ಶಿವನು ನಿರ್ದೇಶಿಸಿದ್ದಾನೆ. ‘ಕಿಂಕರತ್ವದಿಂದ ಶಂಕರತ್ವ’ ಎಂಬ ಉಕ್ತಿಯಂತೆ ವಿನಮ್ರಭಾವದಿಂದ ಸೇವೆ ಮಾಡುವುದರಿಂದ, ನಾವು ಯಾರ ಸೇವೆ ಮಾಡುವೆವೋ ಅವರು ನಮ್ಮನ್ನು ನಿಶ್ಚಿತವಾಗಿ ಅನುಗ್ರಹಿಸುತ್ತಾರಲ್ಲದೆ ಅವರಲ್ಲಿನ ವಿಶೇಷ ಶಕ್ತಿಗಳು ನಮಗೆ ಅನಾಯಾಸವಾಗಿ ಲಭಿಸುತ್ತವೆ.
| ಚಂದ್ರಜ್ಞಾನಾಗಮ (9.124) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು