ಸೋಪವೀತಃ ಶಿಖಾಂ ಬಧ್ವಾ ಪ್ರವಿಶ್ಯ ಚ ಜಲಾಂತರಂ | ಶಿವತೀರ್ಥಂ ವಿಧಾಯಾಥ ತನ್ಮಧ್ಯೇ ಸ್ನಾನಮಾಚರೇತ್ ||
ಜನಿವಾರ ಧರಿಸಿದ ಸಾಧಕನಾಗಿದ್ದರೆ ಅವನು ತನ್ನ ಶಿಖೆಯನ್ನು ಕಟ್ಟಿಕೊಂಡು ನೀರಿನೊಳಗೆ ಹೋಗಿ ನೀರನ್ನು ಶಿವತೀರ್ಥವನ್ನಾಗಿ ಮಾಡಿಕೊಂಡು ಅದರ ಮಧ್ಯೆ ಸ್ನಾನ ಮಾಡಬೇಕು. ನೀರಿನಲ್ಲಿ ಮೀನು, ಕಪ್ಪೆ, ಸರ್ಪ ಮುಂತಾದ ಅನೇಕ ಜಲಜಂತುಗಳಿದ್ದು ಆ ನೀರನ್ನು ನಿತ್ಯ ಸೇವಿಸುತ್ತಿರುವ ಕಾರಣ ದೋಷಪೂರ್ಣವಾಗಿರುತ್ತವೆ. ಆ ದೋಷವನ್ನು ದೂರಮಾಡಲು ಅದನ್ನು ಶಿವತೀರ್ಥವನ್ನಾಗಿ ಮಾಡಿಕೊಳ್ಳಬೇಕಾಗುತ್ತದೆ. ಅಘಮರ್ಷಣ ಸೂಕ್ತ, ಪಂಚಬ್ರಹ್ಮ ಮೊದಲಾದ ಮಂತ್ರಗಳನ್ನು ಪಠಿಸುತ್ತ ಪ್ರಾರ್ಥನೆ ಮೊದಲಾದ ಪ್ರಕ್ರಿಯೆಗಳಿಂದ ನೀರನ್ನು ಶುದ್ಧೀಕರಿಸಿ ಅದು ಶಿವತೀರ್ಥವೆಂದು ಭಾವಿಸಿದಾಗ ಅದು ಶಿವತೀರ್ಥವಾಗುತ್ತದೆ.
| ಚಂದ್ರಜ್ಞಾನಾಗಮ (11.7) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು