ನ್ಯೂಸ್

ಅಮೃತ ಬಿಂದು, ಶ್ರೀ ಶೈವಾಗಮ; ನಿರಾಭಾರಿ ವೀರಶೈವನ ಬಹಿರಂಗ ಲಕ್ಷಣ

ಮುಂಡೀ ವಾ ಜಟಿಲೋ ವಾಪಿ ದಂಡಕಷಾಯಸಂಯುತಃ |

ಸ್ವತಂತ್ರೇ ವೀರಶೈವೇ ತು ನಿರಾಭಾರೀ ಚರೇನ್ಮಹೀಂ ||

ಸ್ವತಂತ್ರವಾದ ವೀರಶೈವ ಧರ್ಮದ ಪ್ರಮುಖ ಪ್ರಭೇದಗಳಲ್ಲಿ ಬರುವ ನಿರಾಭಾರಿ ವೀರಶೈವನು ತನ್ನ ತಲೆಯನ್ನು ಮುಂಡನ ಮಾಡಿಕೊಂಡವನಾಗಿ ಅಥವಾ ಜಡೆಯನ್ನು ಬಿಟ್ಟು ಜಟಾಧಾರಿಯಾಗಿ ಕಾವಿಬಟ್ಟೆ ಧರಿಸಿದವನಾಗಿ ಭೂಮಿಯ ಮೇಲೆ ಸಂಚರಿಸುತ್ತಿರುತ್ತಾನೆ.

ಕಾವಿ ಬಟ್ಟೆ ಧರಿಸುವುದರ ಜತೆಗೆ ಸಂಪೂರ್ಣ ತಲೆ ಬೋಳಿಸಕೊಂಡಿರಬೇಕು ಇಲ್ಲವೇ ಸಂಪೂರ್ಣ ಜಡೆ ಬಿಟ್ಟಿರಬೇಕು. ಇದು ನಿರಾಭಾರಿ ವೀರಶೈವನ ಬಹಿರಂಗ ಲಕ್ಷಣ. ಆತ್ಮೋದ್ಧಾರದ ಜತೆಗೆ ಲೋಕೋದ್ಧಾರದ ಉದ್ದೇಶ ಹೊಂದಿದ ಈತನು ಸದಾ ಲೋಕಸಂಚಾರ ನಿರತನಾಗಿರುತ್ತಾನೆ. ನಿಂತ ನೀರು ಹರಿಯುತ್ತಲೇ ಪರಿಶುದ್ಧವಾಗಿರುವಂತೆ ಈತನು ಸದಾ ಸಂಚಾರ ನಿರತನಾಗಿರುತ್ತಾನೆ.

| ಚಂದ್ರಜ್ಞಾನಾಗಮ (10.43 ) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು