ನ್ಯೂಸ್

ಅಮೃತ ಬಿಂದು, ಶ್ರೀ ಶೈವಾಗಮ; ತನಗಿಂತ ಮಿಗಿಲಾಗಿ ದೇವರನ್ನು ಪ್ರೀತಿಸುವುದೇ ನೈಜ ವೀರಭಕ್ತಿ

ಇಷ್ಟಲಿಂಗವಿಯೋಗೇ ವಾ ವ್ರತಾನಾಂ ಪರಿಚ್ಯುತೌ | ತೃಣವತ್ ಪ್ರಾಣಸಂತ್ಯಾಗ ಇತಿ ವೀರವ್ರತಂ ಮತಮ್ || ಭಕ್ತ್ಯುತ್ಸಾಹವಿಶೇಷೊಽಪಿ ವೀರತ್ವಮಿತಿ ಕಥ್ಯತೇ | ವೀರವ್ರತಸಮಾಯೋಗಾತ್ ವೀರಶೈವಂ ಪ್ರಕೀರ್ತಿತಮ್ ||

ಇಷ್ಟಲಿಂಗವು ದೇಹದಿಂದ ಕಳೆದುಹೋದರೆ ಮತ್ತು ವ್ರತಾಚರಣೆಯಲ್ಲಿ ಚ್ಯುತಿಯುಂಟಾದರೆ ತೃಣದ ಹಾಗೆ ಪ್ರಾಣಗಳನ್ನು ಪರಿತ್ಯಾಗ ಮಾಡುವುದು ವೀರವ್ರತವೆಂದು ಹೇಳಲ್ಪಡುತ್ತದೆ.

ವಿಶೇಷವಾದ ಭಕ್ತಿಯ ಉತ್ಸಾಹವೂ ವೀರವ್ರತವೆಂದು ಕರೆಯಲ್ಪಡುತ್ತದೆ. ಈ ತೆರನಾದ ವೀರವ್ರತವನ್ನು ಅಚರಿಸುವವರು ವೀರಶೈವರು. ‘ವೀರಶೈವ’ದಲ್ಲಿನ ‘ವೀರ’ ಶಬ್ದಕ್ಕೆ ‘ದೈಹಿಕವಾಗಿ ತೋಳುಬಲದಿಂದ ಶೂರನಾದವನು’ ಎಂದರ್ಥವಲ್ಲ, ಬದಲಾಗಿ ‘ಭಗವಂತನ ಭಕ್ತಿಯನ್ನು ಮಾಡುವಲ್ಲಿ ಎಂಥ ತ್ಯಾಗಕ್ಕೂ ಸಿದ್ಧನಾಗುವ ಮೂಲಕ ವೀರನಾದವನು’ ಎಂದರ್ಥ. ತನಗಿಂತ ಮಿಗಿಲಾಗಿ ದೇವರನ್ನು ಪ್ರೀತಿಸುವುದೇ ನೈಜ ವೀರಭಕ್ತಿ. ಇದನ್ನು ಹೊಂದಿದವನು ವೀರಶೈವ.

| ಚಂದ್ರಜ್ಞಾನಾಗಮ (10.33-34) 

|ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು