ನಿಸ್ಪಹೋ ನಿಜಲಿಂಗೈಕ್ಯೋ ಭಿಕ್ಷಾಶೀ ಭಯವರ್ಜಿತಃ | ಮೌನೀ ಭೂತದಯಾಯುಕ್ತೋ ನಿರಾಭಾರ ಇತಿ ಸ್ಮೃತಃ ||
ರಾಗ-ದ್ವೇಷಗಳನ್ನು ಕಳೆದುಕೊಂಡು ಸಂಸಾರದಲ್ಲಿ ನಿರಾಸಕ್ತಿ ರೂಪದ ನಿಸ್ಪಹ ಭಾವವನ್ನು ಅಳವಡಿಸಿಕೊಂಡವನು, ತನ್ನ ಇಷ್ಟಲಿಂಗದಲ್ಲಿ ಐಕ್ಯಭಾವ ಹೊಂದಿದವನು, ಭಿಕ್ಷಾನ್ನವನ್ನು ಭುಂಜಿಸುವವನು, ಯಾವುದೇ ಮತ್ತು ಯಾರದೇ ಭಯ ಇಲ್ಲದಿರುವವನು, ಆವಶ್ಯಕತೆ ಇರುವಷ್ಟು ಮಾತ್ರ ಮಾತನಾಡುತ್ತ ಹೆಚ್ಚಿನ ಸಮಯವನ್ನು ಮೌನದಲ್ಲಿ ಕಳೆಯುವವನು ಮತ್ತು ತೊಂದರೆಯಲ್ಲಿರುವ ಎಲ್ಲ ಪ್ರಾಣಿಗಳ ಮೇಲೆ ದಯಾಭಾವವನ್ನು ಹೊಂದಿದವನು ನಿರಾಭಾರಿ ಎನಿಸುತ್ತಾನೆ. ಇವು ನಿರಾಭಾರಿ ವೀರಶೈವನು ಅಳವಡಿಸಿಕೊಳ್ಳಬೇಕಾದ ಆಂತರಿಕ ಗುಣಗಳಾಗಿವೆ.
| ಚಂದ್ರಜ್ಞಾನಾಗಮ (10.45 )
| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು