ನ್ಯೂಸ್

ಅಮೃತ ಬಿಂದು, ಶ್ರೀ ಶೈವಾಗಮ: ಭಸ್ಮಸ್ನಾನದಿಂದ ಎಲ್ಲ ದೋಷಗಳು ಪರಿಹಾರ

ಮಜ್ಜಯಿತ್ವೇಷ್ಟಲಿಂಗಂ ಚ ಗೃಹೀತ್ವಾ ಭಸಿತಂ ತತಃ | ಭಸ್ಮಸ್ನಾನಂ ತತಃ ಕುರ್ಯಾತ್ ಸರ್ವದೋಷನಿವೃತ್ತಯೇ ||

ಸ್ನಾನದ ನಂತರ ಪೂರ್ವ ಅಥವಾ ಉತ್ತರಾಭಿಮುಖವಾಗಿ ಆಸನದ ಮೇಲೆ ಕುಳಿತು ಇಷ್ಟಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ ನಂತರ ಭಸ್ಮವನ್ನು ತೆಗೆದುಕೊಂಡು ಭಸ್ಮಸ್ನಾನ ಮಾಡಬೇಕು. ಭಸ್ಮಸ್ನಾನದಿಂದ ಎಲ್ಲ ದೋಷಗಳು ಪರಿಹಾರವಾಗುತ್ತವೆ.

ಭಸ್ಮವನ್ನು ಅಂಗೈಗೆ ಧರಿಸಿಕೊಂಡು ಅದರಿಂದ ದೇಹದ ಎಲ್ಲ ಅಂಗಗಳಿಗೆ ಲೇಪಿಸಿಕೊಳ್ಳುವುದಕ್ಕೆ ಭಸ್ಮಸ್ನಾನ ಎನ್ನುತ್ತಾರೆ. ಭಸ್ಮಸ್ನಾನವು ಬರಿಯ ಧಾರ್ವಿುಕ ಆಚರಣೆ ಮಾತ್ರವಾಗಿರದೆ, ಗೋಮಯದಿಂದ ನಿರ್ವಿುಸಿದ ಶುದ್ಧ ಭಸ್ಮದ ಕಣಗಳು ಚರ್ಮಕ್ಕೆ ಸಂಬಂಧಿಸಿದ ಅನೇಕ ರೋಗಗಳನ್ನು ನಿವಾರಿಸುವುದರಿಂದ ಚರ್ಮರೋಗಕ್ಕೆ ಔಷಧವೂ ಆಗಿದೆ.

| ಚಂದ್ರಜ್ಞಾನಾಗಮ (11.10) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು