ನ್ಯೂಸ್

ಅಮೃತ ಬಿಂದು, ಶ್ರೀ ಶೈವಾಗಮ: ಕರನ್ಯಾಸವು ಸೃಷ್ಟಿ, ಸ್ಥಿತಿ, ಸಂಹಾರ ಎಂಬುದಾಗಿ ಮೂರು ಪ್ರಕಾರವಾಗಿದೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಸ್ಥಿತ್ಯುತ್ಪತ್ತಿಲಯಾಭಿಖ್ಯಃ ಕರನ್ಯಾಸಸ್ತ್ರಿಧಾ ಮತಃ | ಗ್ರಹಸ್ಥಾನಾಂ ಸ್ಥಿತಿನ್ಯಾಸ ಉತ್ಪತ್ತಿರ್ಬಹ್ಮಚಾರಿಣಾಂ || ಯತೀನಾಂ ಚ ವನಸ್ಥಾನಾಂ ಸಂಹೃತಿನ್ಯಾಸ ಇಷ್ಯತೇ || ಕರನ್ಯಾಸವು ಸೃಷ್ಟಿ, ಸ್ಥಿತಿ, ಸಂಹಾರ ಎಂಬುದಾಗಿ ಮೂರು ಪ್ರಕಾರವಾಗಿದೆ. ಬ್ರಹ್ಮಚಾರಿಗಳಿಗೆ ಸೃಷ್ಟಿನ್ಯಾಸ, ಗೃಹಸ್ಥರಿಗೆ ಸ್ಥಿತಿನ್ಯಾಸ, ವಾನಪ್ರಸ್ಥ ಮತ್ತು ಸಂನ್ಯಾಸಿಗಳಿಗೆ ಸಂಹಾರನ್ಯಾಸವು ಪ್ರಶಸ್ತವಾದವುಗಳೆಂದು ಹೇಳಲಾಗಿದೆ. ಸೃಷ್ಟಿನ್ಯಾಸವು ಜ್ಞಾನದ ಆವಿಷ್ಕಾರಗಳಿಗೆ ಸಹಾಯಕವಾಗುವುದರಿಂದ ಬ್ರಹ್ಮಚರ್ಯಾಶ್ರಮದ ಸಾಧಕರಿಗೆ ಈ ನ್ಯಾಸವು ಅಧಿಕ ಅನುಕೂಲ.

ಸ್ಥಿತಿನ್ಯಾಸವು ಸಂಸಾರನಿರ್ವಹಣೆಗೆ ಸಹಾಯಕವಾಗುವ ಕಾರಣ ಗೃಹಸ್ಥಾಶ್ರಮದ ಸಾಧಕರಿಗೆ ಅಧಿಕ ಅನುಕೂಲ.

ಸಂಹಾರನ್ಯಾಸವು ಸಂಸಾರಾಸಕ್ತಿಯನ್ನು ಸಂಹರಿಸಿ ವೈರಾಗ್ಯಭಾವ ಹೆಚ್ಚಿಸುವುದರಿಂದ ವಾನಪ್ರಸ್ಥ, ಸಂನ್ಯಾಸಿಗಳಿಗೆ ಇದು ಅನುಕೂಲ.

| ಚಂದ್ರಜ್ಞಾನಾಗಮ (11. 21) / ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು