ನ್ಯೂಸ್

ಶ್ರೀ ಶೈವಾಗಮ ಅಮೃತ ಬಿಂದು; ಶಿವನೇ ಸರ್ವರಿಗೂ ಶಾಶ್ವತ ಸ್ನೇಹಿತ

malli

ಶಂಭೋಃ ಕಲ್ಯಾಣರೂಪಸ್ಯ ಸಖಿತಾಭಾವನಂ ಹಿ ಯತ್ |

ಸಖ್ಯಾಖ್ಯಂ ಶೀಲಮೇತತ್ ಷಟ್ ಪಂಚಾಶಮಿತಿ ನಿಶ್ಚಿತಮ್ || 

ಸರ್ವ ಕಲ್ಯಾಣರೂಪನಾದ ಶಿವನನ್ನು ಆತ್ಮೀಯ ಗೆಳೆಯನೆಂದು ಭಾವಿಸುವುದು ಸಖ್ಯ ಎಂದು ಕರೆಯಲ್ಪಡುವ ಐವತ್ತಾರನೆಯ ಶೀಲ. ಅರ್ಜುನನು ಶ್ರೀಕೃಷ್ಣನ ವಿಷಯಕವಾಗಿ ಇರಿಸಿಕೊಂಡ ಸ್ನೇಹಭಾವನೆಯು ಇದಕ್ಕೆ ಉದಾಹರಣೆಯಾಗಿದೆ. ಸುಖ-ದುಃಖ, ಬಡತನ-ಸಿರಿತನ ಯಾವುದೇ ಪ್ರಸಂಗದಲ್ಲಿ ನಮ್ಮನ್ನು ಕೈಬಿಡದೆ ಸದಾ ಜತೆಗಿದ್ದು ಸರಿಯಾದ ಸಲಹೆ ಕೊಡುವವನೇ ನಿಜವಾದ ಸ್ನೇಹಿತ. ‘ಹೃದ್ದೇಶೇರ್ಜುನ ತಿಷ್ಠತಿ’ ಎಂಬ ಗೀತೋಕ್ತಿಯಂತೆ ಶಿವನು ಸದಾ ನಮ್ಮ ಹೃದಯದಲ್ಲಿ ನೆಲೆಸಿ ಉತ್ತಮ ಕಾರ್ಯಗಳಿಗೆ ಪ್ರೇರಣೆ ನೀಡುವುದರಿಂದ ಅವನೇ ಸರ್ವರಿಗೂ ಶಾಶ್ವತ ಸ್ನೇಹಿತ.

| ಚಂದ್ರಜ್ಞಾನಾಗಮ (9.114) 

| ವ್ಯಾಖ್ಯಾನ: ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಭಗವತ್ಪಾದರು