ನ್ಯೂಸ್

ಅಮೃತ ಬಿಂದು

malli

ಇಷ್ಟಲಿಂಗಸ್ಪರ್ಶಜನ್ಯರೋಮಾಂಚಸಮಲಂಕೃತಿಃ | ಅಷ್ಟಾದಶಂ ಶೀಲಮಿತಿ ಕಥಿತಂ ಭವನಾಶಕಮ್ ||

ಇಷ್ಟಲಿಂಗದ ಸ್ಪರ್ಶದಿಂದ ದೇಹದಲ್ಲಿ ಉಂಟಾಗುವ ರೋಮಾಂಚನವು ಹದಿನೆಂಟನೆಯ ಶೀಲ ಎನಿಸಿದೆ. ಇದರಿಂದ ಜನ್ಮ-ಮರಣರೂಪದ ಭವಬಂಧನ ನಾಶವಾಗುತ್ತದೆ. ಇಷ್ಟಲಿಂಗಧಾರಣೆಯಲ್ಲಿ ಧಾರಣೆ ಮತ್ತು ಅವಧಾರಣೆ ಎಂಬುದಾಗಿ ಎರಡು ಪ್ರಕಾರ. ಅರಿತಾಗಲಿ, ಮರೆತಾಗಲಿ ಕೇವಲ ಧರಿಸುವುದು ಧಾರಣೆ.

ಅವಧಾನಪೂರ್ವಕವಾಗಿ ಅಂದರೆ ಸರ್ವಜ್ಞನೂ ಸರ್ವಕರ್ತನೂ ಆದ ಶಿವನು ಈ ಲಿಂಗರೂಪದಿಂದ ನನ್ನ ದೇಹದ ಮೇಲೆ ಇದ್ದಾನೆ, ನನ್ನ ಪ್ರತಿಯೊಂದು ಗತಿವಿಧಿಯನ್ನೂ ಗಮನಿಸುತ್ತಿರುತ್ತಾನೆ ಎಂಬ ಎಚ್ಚರಿಕೆಯಿಂದ ಧರಿಸುವುದು ಅವಧಾರಣೆ. ಈ ಅವಧಾರಣೆಯಿದ್ದಾಗ ಮಾತ್ರ ನಮ್ಮ ದೇಹದಲ್ಲಿ ರೋಮಾಂಚನಾದಿಗಳು ಉಂಟಾಗುತ್ತವೆ.