ನ್ಯೂಸ್

17 ದಿನಗಳ ನಂತರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ ಅಮಿತಾಭ್

Webdesk - Ashwini HR

ಅಯೋಧ್ಯೆ: ಮೆಗಾಸ್ಟಾರ್ ಅಮಿತಾಭ್ ಬಚ್ಚನ್ 17 ದಿನಗಳ ನಂತರ ಅಂದರೆ ಶುಕ್ರವಾರ ಮತ್ತೊಮ್ಮೆ ಅಯೋಧ್ಯೆಗೆ ತೆರಳಿದ್ದಾರೆ. ಖ್ಯಾತ ಆಭರಣ ವ್ಯಾಪಾರಿ ಕಲ್ಯಾಣ್ ಜ್ಯುವೆಲರ್ಸ್‌ನ ಅಯೋಧ್ಯೆ ಶೋರೂಂ ಅನ್ನು ಅಮಿತಾಭ್ ಇಂದು ಉದ್ಘಾಟಿಸಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸಿವಿಲ್ ಲೈನ್‌ನಲ್ಲಿರುವ ಕಲ್ಯಾಣ್ ಜ್ಯುವೆಲ್ಲರ್ಸ್‌ನ ಶೋರೂಂ ಅನ್ನು ಅಮಿತಾಬ್ ಉದ್ಘಾಟಿಸುವರು.

ಮೊದಲಿಗೆ ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅವರು ನೇರವಾಗಿ ರಾಮಲಲ್ಲಾ ನೋಡಲು ತೆರಳಲಿದ್ದಾರೆ. ರಾಮಲಲ್ಲಾ ದರ್ಶನ ಪಡೆದ ಬಳಿಕ ವಿಭಾಗೀಯ ಆಯುಕ್ತ ಗೌರವ್ ದಯಾಳ್ ಅವರ ಸ್ಥಳಕ್ಕೆ ತೆರಳಿ ಅಲ್ಲಿಂದ ಮಧ್ಯಾಹ್ನ 3.30ಕ್ಕೆ ಶೋರೂಂ ಉದ್ಘಾಟನೆಗೆ ತೆರಳುವರು. ಆದರೆ ಇಂದೇ ಅಮಿತಾಭ್ ವಾಪಸಾಗಲಿದ್ದಾರೆ.

ಸಿದ್ಧತೆಯಲ್ಲಿ ನಿರತವಾದ ಆಡಳಿತ 

ಅಮಿತಾಭ್ ಅವರ ಅಯೋಧ್ಯೆ ಭೇಟಿಗೆ ಆಡಳಿತ ಕೂಡ ಸಿದ್ಧತೆ ಆರಂಭಿಸಿದೆ. ಮೌನಿ ಅಮಾವಾಸ್ಯೆಯಿಂದಾಗಿ ಅಯೋಧ್ಯೆಯಲ್ಲಿ ಲಕ್ಷಾಂತರ ಭಕ್ತರು ಸೇರಬಹುದು. ಅಮಿತಾಬ್ ಬಚ್ಚನ್​​​ಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿರುವ ಕಾರಣ ಜನಸಂದಣಿಯನ್ನು ನಿಯಂತ್ರಿಸಲು ಡಬಲ್ ಸವಾಲು ಎದುರಾಗಬಹುದು. ಅಮಿತಾಭ್ ಅವರನ್ನು ನೋಡಲು ಸಿವಿಲ್ ಲೈನ್‌ನಲ್ಲಿರುವ ಶೋ ರೂಂ ಸುತ್ತಲೂ ಸಾವಿರಾರು ಜನರು ಸೇರಬಹುದು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಿದ್ಧತೆಯಲ್ಲಿ ತೊಡಗಿದೆ.